ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರ ಎಂದಿಗೂ ಪಾಕಿಸ್ತಾನ ಆಗಲ್ಲ. ಉಗ್ರ ದಾಳಿಗಳನ್ನು ನಿಲ್ಲಿಸಿ, ನಮ್ಮನ್ನು ನೆಮ್ಮದಿಯಿಂದ ಜೀವನ ನಡೆಸಲು ಬಿಡಿ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ. ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಗಂದರ್‌ಬಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 7 ಮಂದಿ ವಲಸೆ ಕಾರ್ಮಿಕರು ಮೃತಪಟ್ಟ ಬೆನ್ನಲ್ಲೇ ಫಾರೂಕ್ ಅಬ್ದುಲ್ಲಾ ಭಾವನಾತ್ಮಕ ಹೇಳಿಕೆ ನೀಡಿದ್ದು, ಹೊರಗಿನ ಕಾರ್ಮಿಕರನ್ನು ಉಲ್ಲೇಖಿಸಿದ ಅವರು, ಕಾಶ್ಮೀರದಲ್ಲಿ ಹಣ ಸಂಪಾದಿಸಲು ಮತ್ತು ಕುಟುಂಬಕ್ಕೆ ಕಳುಹಿಸಲು ಬರುವ ಹೊರಗಿನ ಕಾರ್ಮಿಕರು ನಿನ್ನೆ ಈ ಕ್ರೂರರಿಂದ ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದು ಇದರಲ್ಲಿ ಜನರ ಸೇವೆ ಮಾಡುವ ನಮ್ಮ ವೈದ್ಯರೂ ಸೇರಿದ್ದಾರೆ. ಇದನ್ನು ನಾವು ಹಲವು ವರ್ಷಗಳಿಂದ ನೋಡುತ್ತಿದ್ದೇವೆ ಮತ್ತು ಭಾರತದೊಂದಿಗಿನ ಸಂಬಂಧ ಸುಧಾರಿಸಬೇಕಾದರೆ ಇದೆಲ್ಲವೂ ನಿಲ್ಲಬೇಕು ಎಂದು ಪಾಕಿಸ್ತಾನದ ಆಡಳಿತಗಾರರಿಗೆ ಹೇಳಲು ಬಯಸುತ್ತೇವೆ ಎಂದು ಡಾ.ಅಬ್ದುಲ್ಲಾ ಹೇಳಿದರು.
ಶಾಂತಿ ಮತ್ತು ಘನತೆಯಿಂದ ಬದುಕಲು ಮನವಿ ಮಾಡಿದ ಅವರು ಭಯೋತ್ಪಾದನೆ ವಿರುದ್ಧ ಏಕತೆಯ ಅಗತ್ಯವನ್ನು ಒತ್ತಿ ಹೇಳಿದರು. ಈ ಭಯೋತ್ಪಾದಕ ದಾಳಿಯೂ ಕಾಶ್ಮೀರದಲ್ಲಿ ದುಃಖ ಮತ್ತು ಕಳವಳದ ಅಲೆಯನ್ನು ಎಬ್ಬಿಸಿದೆ. ಅಲ್ಲದೆ ಸ್ಥಳೀಯ ನಾಯಕರು ಭಯೋತ್ಪಾದನೆಯ ವಿರುದ್ಧ ಮಾತನಾಡುವಂತಾಗಿದೆ ಎಂದರು.