ಹೊಸದಿಗಂತ ವರದಿ,ಕಲಬುರಗಿ:
ಭಾರತೀಯ ಚಲನಚಿತ್ರ ರಂಗದಲ್ಲಿ ಭಾರಿ ಸಂಚಲನ ಮೂಡಿಸಿರುವ, ದೇಶಭಕ್ತಿ ಸಾರುವ `ದಿ ಕಾಶ್ಮೀರಿ ಫೈಲ್ಸ್ ಹಿಂದಿ ಚಲನಚಿತ್ರಕ್ಕೆ ಮಂಗಳವಾರ ಸೇಡಂ ಕ್ಷೇತ್ರದ 300 ಹೆಚ್ಚು ಜನ ಬಿಜೆಪಿ ಕಾರ್ಯಕರ್ತರು ಹಾಗೂ 40ಕ್ಕೂ ಹೆಚ್ಚು ವಿವಿಧ ಮಠಾಧೀಶರು, ಪೀಠಾಧೀಶರು ಇಲ್ಲಿಗೆ ಆಗಮಿಸಿ ವೀಕ್ಷಿಸಿರುವುದು ಎಲ್ಲರ ಗಮನ ಸಳೆಯಿತು.
ನಗರದ ಬಿಗ್ ಬಜಾರನಲ್ಲಿನ ಮಿರಾಜ್ ಟಾಕೀಸ್‍ನಲ್ಲಿ ವಿವೇಕ ರಂಜನ್ ಅಗ್ನಿಹೋತ್ರಿ ನಿರ್ದೇಶನದ `ರೈಟ್ ಟೂ ಜಸ್ಟೀಸ್’ ಟ್ಯಾಗ್‍ಲೈನ್ ಅಡಿ ದೇಶಾದ್ಯಂತ ತೆರೆ ಕಂಡಿರುವ `ದಿ ಕಾಶ್ಮೀರಿ ಫೈಲ್ಸ್’ ಚಿತ್ರ ನೋಡಲು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೇಡಂ ಕ್ಷೇತ್ರದಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಾಲ್ಕು ಬಸ್, ಕ್ರೂಸರ್ ಸೇರಿ ಸುಮಾರು 300ಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿದ್ದರು. ಇಡೀ 340 ಆಸನ ಸಾಮಥ್ರ್ಯದ ಟಾಕೀಸ್‍ನಲ್ಲಿ ಸಾಮಥ್ರ್ಯಕ್ಕಿಂತ ಮೀರಿ ಜನ ಬಂದಿದ್ದರಿಂದ ಆಯೋಜಕರಿಗೆ ತಲೆ ನೋವಾಗಿತ್ತು. ಕೊನೆಗೆ ಪೂರ್ಣಾವಧಿ ಕಾರ್ಯಕರ್ತರೇ ಎದ್ದು ನಿಂತು ಚಲನಚಿತ್ರ ವೀಕ್ಷಿಸಬೇಕಾಯಿತು ಎಂದು ಶಾಸಕ ಪಾಟೀಲ್ ತಿಳಿಸಿದರು.
ಕೊತ್ತಲ ಬಸವೇಶ್ವರ ದೇವಸ್ಥಾನದ ಪೂಜ್ಯ ಡಾ. ಸದಾಶಿವ ಸ್ವಾಮೀಜಿ, ಸುಲೇಪೇಠದ ವಿಶ್ವಕರ್ಮ ಮಠದ ಪೂಜ್ಯ ದೊಡ್ಡೇಂದ್ರ ಸ್ವಾಮೀಜಿ, ಸುಲೇಪೇಟನ ಪಂಪಾವತಿ ದೇವರು, ಶಖಾಪುರ ಎಸ್. ಎನ್. ಪೂಜ್ಯರಾದ ಸಿದ್ದರಾಮ ಶಿವಾಚಾರ್ಯರು, ಸೇಡಂನ ಗೌರಿಶಂಕರ ಶಿವಾಚಾರ್ಯರು, ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಗೌರಿಶಂಕರ ಶಿವಾಚಾರ್ಯರು, ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಲಿಂಗರಾಜಪ್ಪ ಅಪ್ಪ, ಹಾಲಪ್ಪಯ್ಯ ಸ್ವಾಮೀಜಿ ಸೇರಿದಂತೆ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್, ಶಾಸಕರ ಧರ್ಮಪತ್ನಿ ಸಂತೋಷಿರಾಣಿ ತೇಲ್ಕೂರ್, ಮುಕುಂದ ದೇಶಪಾಂಡೆ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಪ್ರಮುಖರಾದ ಗೌತಮ ಪಾಟೀಲ್, ಆರ್.ಜಿ. ಶೆಟಗಾರ್ ಮತ್ತಿತರರು ಭಾಗವಹಿಸಿದ್ದರು.