Saturday, August 20, 2022

Latest Posts

ಗೂಡ್ಸ್ ವಾಹನ- ಕಾರ್ ನಡುವೆ ಡಿಕ್ಕಿ: ಇಬ್ಬರ ಸಾವು

ಹೊಸದಿಗಂತ ವರದಿ, ಕಲಬುರಗಿ:

ಗೂಡ್ಸ್ ವಾಹನ ಮತ್ತು ಕಾರುಮಧ್ಯೆ ಮುಖಾ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ದುಮ೯ರಣ ಹೊಂದಿದ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಚಿತಲಿ ಗ್ರಾಮದ ಬಳಿ ಗುರುವಾರ ಸಂಭವಿಸಿದೆ.

ಆಳಂದ ತಾಲೂಕಿನ ಬಾಳೇನಗರ ನಿವಾಸಿ ಜಾಫರ್ ಖಾಸಿಂ (27), ಮತ್ತು ಗುಜರಾತ್ ಮೂಲದ ಜೋಧಾರಾಮ ಜಸ್ವಂತ್ (40) ಸಾವನ್ನಪ್ಪಿರುವ ದುದೈ೯ವಿಗಳಾಗಿದ್ದಾರೆ.

ಉಮಗಾ೯ದಿಂದ ಆಳಂದ ಪಟ್ಟಣಕ್ಕೆ ಬರುತ್ತಿದ್ದ, ಕಾರು ಆಳಂದಿಂದ ಉಮಗಾ೯,ಗೆ ತೆರಳುತ್ತಿದ್ದ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿಸಂಭವಿಸಿದೆ.

ಘಟನೆಯಲ್ಲಿ ಪ್ರಯಾಣಿಕರೊಂದಿಗೆ ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಹೈದರಾಬಾದ್, ಗೆ ರವಾನೆ ಮಾಡಲಾಗಿದೆ.

ಆಳಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!