ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ವಿರುದ್ಧ ಸೋಂಪಾಲ್ ಕಾಮಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ ನೇಪಾಳ 230 ರನ್ ಸಿಡಿಸಿದೆ.
ಭಾರತಪ್ರಮುಖ ಕ್ಯಾಚ್ ಕೈಚೆಲ್ಲಿ ದುಬಾರಿ ಬೆಲೆ ತೆತ್ತಿದೆ. ಆದರೆ ಬೌಲರ್‌ಗಳ ಪರಾಕ್ರಮದಿಂದ ನೇಪಾಳ ತಂಡವನ್ನು 48.2 ಓವರ್‌ಗಳಲ್ಲಿ 230 ರನ್‌ಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ಕುಶಾಲ್ ಭರ್ಟೆಲ್ ಹಾಗೂ ಆಸಿಫ್ ಶೇಕ್ ಜೊತೆಯಾಟ ನೇಪಾಳ ತಂಡಕ್ಕೆ ಉತ್ತಮ ಆರಂಭ ನೀಡಿತು. ಕುಶಾಲ್ ಭರ್ಟೆಲ್ 25 ಎಸೆತದಲ್ಲಿ 38 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ದಗಗೆ ಈ ಜೋಡಿ 65 ರನ್ ಜೊತೆಯಾಟ ನೀಡಿತು. ಇತ್ತ ಆಸೀಫ್ ಶೇಕ್ 58 ರನ್ ಸಿಡಿಸಿ ಔಟಾದರು.
ಭೀಮ್ ಶರ್ಕಿ 7, ನಾಯಕ ರೋಹಿತ್ ಪೌದೆಲ್ 5 ಹಾಗೂ ಕುಶಾಲ್ ಮಲ್ಲಾ 2 ರನ್ ಸಿಡಿಸಿ ಔಟಾದರು. ಗುಲ್ಶನ್ ಜಾ ಹಾಗೂ ದೀಪೇಂದ್ರ ಸಿಂಗ್ ಜೊತೆಯಾಟದಿಂದ ನೇಪಾಳ ಮತ್ತೆ ಚೇತರಿಸಿಕೊಂಡಿತು. ಗುಲ್ಶನ್ ಜಾ 23 ರನ್ ಕಾಣಿಕೆ ನೀಡಿದರು. ದೀಪೇಂದ್ರ ಸಿಂಗ್ 29 ರನ್ ಸಿಡಿಸಿದರು.
ಸೋಂಪಾಲ್ 48 ರನ್ ಕಾಣಿಕೆ ನೀಡಿದರು. ಆದರೆ ಸಂದೀಪ್ ಲಮಿಚಾನೆ, ಕರನ್ ಕೆಸಿ ಹಾಗೂ ಲಲಿತ್ ರಾಜಬನ್ಶಿ ಹೋರಾಟ ನೀಡಲಿಲ್ಲ. ಹೀಗಾಗಿ ನೇಪಾಳ 48.2 ಓವರ್‌ಗಳಲ್ಲಿ 230 ರನ್ ಸಿಡಿಸಿ ಆಲೌಟ್ ಆಯಿತು.