ಟಾಲಿವುಡ್​ನ ಹಿರಿಯ ನಟಿ, ನಿರ್ಮಾಪಕಿ ಕೃಷ್ಣವೇಣಿ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್​ನ ಹಿರಿಯ ನಟಿ ಕೃಷ್ಣವೇಣಿ ನಿಧನರಾಗಿದ್ದಾರೆ. ನಟಿ ಕೃಷ್ಣವೇಣಿ ಅವರಿಗೆ 102 ವರ್ಷ ವಯಸ್ಸಾಗಿತ್ತು.

ವೃದ್ಧಾಪ್ಯದ ಕಾಯಿಲೆಗಳಿಂದ ಬಳಲುತ್ತಿದ್ದ ನಟಿ ಕೃಷ್ಣವೇಣಿ, ಹೈದರಾಬಾದ್‌ನ ಫಿಲ್ಮ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟಿಯ ನಿಧನ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೃಷ್ಣವೇಣಿ ಅವರು 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1940 ರಲ್ಲಿ, ಅವರು ಮಿರ್ಜಾಪುರದ ರಾಜ ಮೇಕಾ ರಂಗಯ್ಯ ಅವರನ್ನು ವಿವಾಹವಾದ್ರು.

ಕೃಷ್ಣವೇಣಿ ಕೇವಲ ನಟಿಯಾಗಿ ಮಾತ್ರವಲ್ಲದೆ, ನಿರ್ಮಾಪಕಿಯಾಗಿಯೂ ಉದ್ಯಮದಲ್ಲಿ ಜನಪ್ರಿಯತೆ ಗಳಿಸಿದ್ರು. ‘ಮನದೇಶಂ’ ಚಿತ್ರದ ಮೂಲಕ ದಿವಂಗತ ನಂದಮೂರಿ ತಾರಕ ರಾಮರಾವ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಇವರೇ ಆಗಿದ್ದಾರೆ. ಅನೇಕ ಹೊಸ ಪ್ರತಿಭೆಗಳಿಗೆ ಸಿನಿಮಾ ಚಾನ್ಸ್ ಕೊಟ್ಟು ಬೆಳೆಸಿದರು.

ತಮ್ಮ ಕುಟುಂಬ ಒಡೆತನದ ಸ್ಟುಡಿಯೋ ಮೂಲಕ ಅವರು ಭೀಷ್ಮ ಮತ್ತು ದಕ್ಷ ಯಜ್ಞಂ ಸೇರಿದಂತೆ ಸುಮಾರು ಒಂದು 12ಕ್ಕೂ ಚಲನಚಿತ್ರಗಳನ್ನು ನಿರ್ಮಿಸಿದರು. ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಅವರಿಗೆ 2004 ರಲ್ಲಿ ರಘುಪತಿ ವೆಂಕಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕೃಷ್ಣವೇಣಿ ಅವರು ತಮ್ಮದೇ ಆದ ಸಿನಿಮಾಗಳಿಗೆ ಹಾಡುಗಳನ್ನು ಸಹ ಹಾಡುತ್ತಿದ್ರು. ಗಾಯಕಿಯಾಗಿಯೂ ಜನಪ್ರಿಯರಾಗಿದ್ದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕೃಷ್ಣವೇಣಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ನಟಿ ಮತ್ತು ಚಲನಚಿತ್ರ ನಿರ್ಮಾಪಕ ಕೃಷ್ಣವೇಣಿ ಅವರ ನಿಧನ ನನಗೆ ದುಃಖ ತಂದಿದೆ. ಕೃಷ್ಣವೇಣಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮನ ದೇಶಂ ಚಿತ್ರದ ಮೂಲಕ ಎನ್‌ಟಿಆರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ಮೂಲಕ ಕಲಾ ಲೋಕಕ್ಕೆ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದು ಬರೆದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!