Saturday, December 9, 2023

Latest Posts

ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ, ಹಿಂದುಗಳ ಶ್ರದ್ಧೆಗೆ ಸರ್ಕಾರದ ಮಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಚಿಕ್ಕಮಗಳೂರಿನ  ಧಾರ್ಮಿಕ ಕ್ಷೇತ್ರ ದತ್ತಾತ್ರೇಯ ಪೀಠಕ್ಕೆ ಆಡಳಿತ ಮಂಡಳಿ ನೇಮಕ ಮಾಡುವ ಮೂಲಕ ಹಿಂದೂಗಳ ಶ್ರದ್ಧೆಗೆ ಸರ್ಕಾರದ ಮಣೆ ಹಾಕಿದೆ.
ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ದತ್ತಾತ್ರೆಯ ಪೀಠದ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ, ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿ, ದತ್ತಾತ್ರೇಯ ಪೀಠಕ್ಕೆ ಆಡಳಿತ ಮಂಡಳಿಯನ್ನು ನೇಮಕಗೊಳಿಸಿದೆ. ದತ್ತಪಾದುಕೆ ಅನುಸೂಯಾ ದೇವಿಯ ಪೂಜೆಗೆ ಅರ್ಚಕರ ನೇಮಕದ ಕುರಿತು ವ್ಯವಸ್ಥಾಪನಾ ಸಮಿತಿಯು ನಿರ್ಧರಿಸಲಿದೆ.
ಈ ಬಗ್ಗೆ ಟ್ವಿಟ್‌ ಮೂಲಕ ಸಂತಸ ಹಂಚಿಕೊಂಡಿರುವ ಸಚಿವ ಸುನೀಲ್‌ ಕುಮಾರ್‌, ಹಿಂದೂಗಳ ಪವಿತ್ರ ಕ್ಷೇತ್ರ ದತ್ತಪೀಠಕ್ಕೆ ಆಡಳಿತ ಮಂಡಳಿಯನ್ನು ನೇಮಕ ಮಾಡುವ ಮೂಲಕ ಸಮಸ್ತ ಹಿಂದೂಗಳ ದಶಕಗಳ ಕಾಲದ ಕನಸನ್ನು ನನಸು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದವನ್ನ ಅರ್ಪಿಸುವುದಾಗಿ ಟ್ವಿಟರ್‌ ನಲ್ಲಿ ಬರೆದುಕೊಂಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!