Sunday, June 26, 2022

Latest Posts

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಪುತ್ರ ಹರಿಕೃಷ್ಣನ್: ವಧೂವರರನ್ನು ಹರಸಿದ ಜೆ.ಪಿ.ನಡ್ಡಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರ ಪುತ್ರ ಹರಿಕೃಷ್ಣನ್ ಮತ್ತು ದಿಲ್ನಾ ಅವರು ಕಲ್ಲಿಕೋಟೆಯ ಆಶೀರ್ವಾದ್ ಲೋನ್ಸ್‌ನಲ್ಲಿ ಶುಕ್ರವಾರ ಶುಭ ಗಳಿಗೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಈ ಸಂದರ್ಭದಲ್ಲಿ ವಿವಿಧ ವಲಯಗಳ ರಾಷ್ಟ್ರೀಯ, ರಾಜ್ಯ ಮಟ್ಟದ ಮುಖಂಡರು ಭಾಗವಹಿಸಿ ವಧೂವರರನ್ನು ಹರಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಅಖಿಲ ಭಾರತ ಕಾರ್ಯದರ್ಶಿ ಸುನೀಲ್ ದೇವದರ್, ನಟ ಮಮ್ಮುಟ್ಟಿ , ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ , ಕೇಂದ್ರ ಸಚಿವ ವಿ.ಮುರಳೀಧರನ್, ಸಂಸದ ಕೆ.ಪಟ್ಟಾಭಿರಾಮನ್, ಕಲ್ಯಾಣರಾಮನ್, ಎಂ.ವಿ.ಶ್ರೇಯಮ್ಸ್ ಕುಮಾರ್, ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ , ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ , ಕರ್ನಾಟಕ ಸಚಿವ ವಿ.ಸುನೀಲ್‌ಕುಮಾರ್, ಶಾಸಕರಾದ ತೊಟ್ಟತ್ತಿಲ್ ರವೀಂದ್ರನ್, ಸಚಿಂದೇವ್ ಮುಂತಾದವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.
ಅಲ್ಲದೆ ತುಷಾರ್ ವೆಲ್ಲಾಪಳ್ಳಿ , ಸಿ.ಪಿ.ರಾಧಾಕೃಷ್ಣನ್, ವಿವೇಕಾನಂದ ಚೈತಾ, ಪತ್ರಕರ್ತ ಶ್ರೀಕಂಠನ್ ನಾಯರ್, ಪಿ.ವಿ.ಚಂದ್ರನ್, ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎ.ಪ್ರದೀಪ್‌ಕುಮಾರ್, ಆರ್‌ಎಂಪಿ ರಾಜ್ಯ ಕಾರ್ಯದರ್ಶಿ ಎನ್.ವೇಣು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಮುಖರಾದ ಎ.ಪಿ.ಅಬ್ದುಲ್ಲ ಕುಟ್ಟಿ , ಟಾಮ್ ವಡಕ್ಕನ್, ಓ.ರಾಜಗೋಪಾಲ್, ಸಿ.ಕೆ.ಪದ್ಮನಾಭನ್, ಕುಮ್ಮನಂ ರಾಜಶೇಖರನ್, ಪಿ.ಕೆ.ಕೃಷ್ಣ್ಣದಾಸ್, ಎ.ಎನ್.ರಾಧಾಕೃಷ್ಣನ್, ಜಾರ್ಜ್ ಕುರಿಯನ್, ಎಂ.ಟಿ.ರಮೇಶ್, ವತ್ಸನ್ ತಿಲ್ಲಂಗೇರಿ, ಪಿ.ಗೋಪಾಲನ್ ಕುಟ್ಟಿ , ನಿರ್ದೇಶಕ ರಾಜಸೇನನ್, ನಟ ವಿವೇಕ್ ಗೋಪನ್ ಮುಂತಾದವರು ವಿವಾಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲೆಯ ಬಿಜೆಪಿ ಸಹಿತ ವಿವಿಧ ವಲಯಗಳ ಪ್ರಮುಖರು ಹಾಗೂ ಕಾರ್ಯಕರ್ತರು ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss