ದಿನಭವಿಷ್ಯ | ನಿಮಗಿಂದು ಪೂರಕ ದಿನ- ಕಾರ್ಯಗಳು ಸಂಪನ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಸುಗಮ ಕಾರ್ಯ, ಉದ್ದೇಶ ಪ್ರಾಪ್ತಿ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ. ಸೌಹಾರ್ದ ನೆಲೆಸುವುದು. ಖರ್ಚು ಹೆಚ್ಚಿದರೂ ಅದು ನಿಮ್ಮ ತಲೆ ಕೆಡಿಸದು.

ವೃಷಭ
ಕೆಲಸದಲ್ಲಿ ಸಫಲತೆ. ಗುರಿಸಾಧನೆ. ಧನಾಗಮದ ಹಾದಿ ಸುಗಮ. ಕೌಟುಂಬಿಕ ಪರಿಸರ ನಿಮಗೆ ಹಿತಕರ ಎನಿಸುವುದು. ಬಂಧುಗಳ ಸಹಕಾರ.

ಮಿಥುನ
ನಿಮ್ಮ ಮನಸ್ಥಿತಿ ಕೆಡಿಸುವಂತಹ ವ್ಯಕ್ತಿಗಳಿಂದ ದೂರವಿರಿ. ಅಂತಹವರನ್ನು ಗುರುತಿಸುವುದು ಕಷ್ಟವಲ್ಲ. ಕೆಲಸದಲ್ಲಿ ಸೂಕ್ತ ಫಲ ಸಿಗದು.

ಕಟಕ
ಸವಾಲಿನ ದಿನ. ಕೆಲಸಗಳು ಸಕಾಲದಲ್ಲಿ ಮುಗಿಯದೆ ವಿಳಂಬವಾಗುವುದು. ಹಿರಿಯರ ಜತೆ ವ್ಯವಹರಿಸುವಾಗ ನಯವಿನಯವಿರಲಿ.

ಸಿಂಹ
ನಿಮ್ಮ ಕಾರ್ಯಕ್ಕೆ ಅಡ್ಡಿಗಳು ಒದಗುವವು. ಹಾಗಾಗಿ ಉದ್ದೇಶಿತ ಕೆಲಸ ಪೂರ್ಣವಾಗದು. ಪ್ರೀತಿಪಾತ್ರರ ಜತೆ ನಿಮ್ಮ ಭಾವನೆ ಹಂಚಿಕೊಳ್ಳಲು ಹಿಂಜರಿಕೆ ಬೇಡ.

ಕನ್ಯಾ
ಇಂದಿನ ದಿನ ನಿಮಗೆ ಫಲಪ್ರದ ಎನಿಸುವುದು. ಅಡ್ಡಿಗಳ  ನಿವಾರಣೆ. ಎಲ್ಲರಿಂದ ಸಹಕಾರ. ಕೌಟುಂಬಿಕ ಉದ್ವಿಗ್ನತೆ ಶಮನ, ಸೌಹಾರ್ದತೆ ನೆಲೆಸುವುದು.

ತುಲಾ
ಬಾಕಿ ಉಳಿದ ಕಾರ್ಯ ಮುಗಿಸಲು ಕಠಿಣ ಶ್ರಮ ಪಡುವಿರಿ. ಇದರಿಂದ ಅಶಾಂತಿ, ಹತಾಶೆ ಸಂಭವ. ಹಣದ ಕೊರತೆ ಚಿಂತೆಗೆ ಕಾರಣವಾಗುವುದು.

ವೃಶ್ಚಿಕ
ಕೆಲಸದಲ್ಲಿ ಒತ್ತಡ. ನಿರ್ಲಕ್ಷ್ಯ ತೋರದಿರಿ.ಅದರಿಂದ ತಪ್ಪುಗಳು ಸಂಭವಿಸಬಹುದು.ವಿವಾಹಿತರು ತಮ್ಮೊಳಗಿನ ಭಿನ್ನಮತವನ್ನು ಪರಿಹರಿಸಿಕೊಳ್ಳಬೇಕು.

ಧನು
ನಿಮ್ಮ ಕಾರ್ಯಕ್ಷಮತೆಯ ಕುರಿತು ನಿಮಗೇ ಕೆಲವು ಅನುಮಾನಗಳಿವೆ. ಅಂತಹ ಶಂಕೆ ದೂರ ಮಾಡಿ. ಪೂರ್ಣ ವಿಶ್ವಾಸದಿಂದ ಕಾರ್ಯವೆಸಗಿ.

ಮಕರ
ನಿಮಗಿಂದು ಪೂರಕ ದಿನ. ಕಾರ್ಯಗಳು ಸಂಪನ್ನ. ಬಂಧುಗಳಿಂದ ಶುಭ ಸಮಾಚಾರ. ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಗುವ ಸಂಕೇತಗಳು.

ಕುಂಭ
ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷಿಸದಿರಿ. ವೈದ್ಯರನ್ನು ಕಾಣಿರಿ. ಪ್ರೀತಿಪಾತ್ರರಿಂದ ಸಂತೋಷದ ಸುದ್ದಿ ಕೇಳುವಿರಿ.ಖರ್ಚು ತುಸು ಹೆಚ್ಚಬಹುದು.

ಮೀನ
ಸಂಬಂಧದಲ್ಲಿ ಉದ್ವಿಗ್ನತೆ ಉಂಟಾದೀತು. ಪರಿಸ್ಥಿತಿಯನ್ನು ಪ್ರಬುದ್ಧತೆಯಿಂದ ನಿಭಾಯಿಸಿ. ಆತುರದ ತೀರ್ಮಾನ ಬೇಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!