Friday, September 29, 2023

Latest Posts

ದಿನಭವಿಷ್ಯ| ಪ್ರಮುಖ ವಿಷಯವೊಂದರ ಕುರಿತು ಸಮಾಲೋಚನೆ ನಡೆಸುವ ಅಗತ್ಯವಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಸಂಗಾತಿ ಜತೆಗೆ ನಿಕಟ  ಅನುಬಂಧ. ಭಾವನಾತ್ಮಕ ಸ್ಪಂದನೆ.  ವೃತ್ತಿಯಲ್ಲಿ ಆರ್ಥಿಕ ಲಾಭ. ವಸ್ತು ಖರೀದಿಯ ಸಂತೋಷ. ಮಾನಸಿಕ ತೃಪ್ತಿ.

ವೃಷಭ
ಪ್ರೀತಿಪಾತ್ರರ ಜತೆ ಎಚ್ಚರದಿಂದ ವ್ಯವಹರಿಸಿ. ವಾಗ್ವಾದ, ಭಿನ್ನಮತ ಏರ್ಪಡುವ ಸಂಭವವಿದೆ. ಅನಿರೀಕ್ಷಿತ ಖರ್ಚು. ಒತ್ತಡದಿಂದ ತಲೆನೋವು.

ಮಿಥುನ
ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ. ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ. ಆಪ್ತರೊಡನೆ ನಿಮ್ಮ ಪ್ರೀತಿಯ ಭಾವನೆ ವ್ಯಕ್ತಪಡಿಸುವ ಸಂಭವ.  ಸಕಾರಾತ್ಮಕ ಪ್ರತಿಕ್ರಿಯೆ.

ಕಟಕ
ಬಿಡುವಿಲ್ಲದ ದಿನ. ವೃತ್ತಿಯಲ್ಲಿ  ಹೊಣೆಗಾರಿಕೆ ಹೆಚ್ಚು. ಆರ್ಥಿಕವಾಗಿ ಹಿನ್ನಡೆ. ಸಂಗಾತಿಯಿಂದ ಅಚ್ಚರಿಯ ಸುದ್ದಿ ಕೇಳಿ ಬಂದೀತು.

ಸಿಂಹ
ವೃತ್ತಿಪರರಿಗೆ ಯಶಸ್ವಿ ದಿನ. ಆರ್ಥಿಕ ಲಾಭ. ಪ್ರೀತಿಪಾತ್ರರ ಜತೆ ಹೆಚ್ಚು ಹೊಂದಾಣಿಕೆ ಬೇಕು. ನಿಮ್ಮ ನಡೆನುಡಿ ಅಪಾರ್ಥ ಕಲ್ಪಿಸದಂತೆ ನೋಡಿಕೊಳ್ಳಿ.

ಕನ್ಯಾ
ಕೆಲಸದಲ್ಲಿ ಏಕಾಗ್ರತೆ ಮೂಡದು. ಮನದೊಳಗೆ ಹಲವು ಗೊಂದಲಗಳು. ಮನಶ್ಯಾಂತಿ ಅವಶ್ಯ. ಪ್ರಯಾಣದಲ್ಲಿ ಎಚ್ಚರ ವಹಿಸಿರಿ.

ತುಲಾ
ಪ್ರಮುಖ ವಿಷಯ ವೊಂದರ ಕುರಿತು ಸಮಾಲೋಚನೆ ನಡೆಸುವ ಅಗತ್ಯವಿದೆ. ಆತುರದ ನಿರ್ಧಾರ ತಾಳದಿರಿ. ಕೌಟುಂಬಿಕ ಒತ್ತಡವೂ ಹೆಚ್ಚು.

ವೃಶ್ಚಿಕ
ಬೇಸರದ ಮನಸ್ಥಿತಿ.  ನಿಮ್ಮ ಮನಸ್ಸು ಉಲ್ಲಸಿತಗೊಳಿಸುವ ಕಾರ್ಯದಲ್ಲಿ ತೊಡಗಿ. ಆರ್ಥಿಕ ಪ್ರಗತಿ ನೀವು ನಿರೀಕ್ಷಿಸಿದಂತೆ ಸಾಗಲಾರದು.

ಧನು
ಕಾರ್ಯಗಳೆಲ್ಲ ಸುಗಮ. ವೃತ್ತಿಯಲ್ಲಿ ಮತ್ತು ಖಾಸಗಿಯಾಗಿ ಅಪೇಕ್ಷಿತ ಪ್ರಗತಿ. ಕುಟುಂಬ ಸದಸ್ಯರ ಜತೆ ಉತ್ತಮ ಹೊಂದಾಣಿಕೆ. ಬಂಧುಗಳ ಭೇಟಿ.

ಮಕರ
ವೃತ್ತಿಯಲ್ಲಿ ಯಶಸ್ಸು. ಧನಲಾಭ. ಖಾಸಗಿ ಬದುಕಿನಲ್ಲಿ ಉದ್ಭವಿಸಿದ್ದ ಸಮಸ್ಯೆ ಪರಿಹಾರ. ಮನಸ್ತಾಪ ನಿವಾರಣೆ. ದೈಹಿಕ ನೋವು ಕಾಣಿಸಿಕೊಂಡೀತು.

ಕುಂಭ
ಇತರರು ಮೆಚ್ಚುವ ರೀತಿಯಲ್ಲಿ ವೃತ್ತಿಯ ಕಾರ್ಯ ಪೂರೈಸುವಿರಿ. ಆದರೆ ವೈಯಕ್ತಿಕ ಬದುಕಿನಲ್ಲಿ ನೀವು ನಿರೀಕ್ಷಿಸಿದಂತೆ ಸಾಗದೆ ನಿರಾಶೆ.

ಮೀನ
ಸಂಗಾತಿಯ ವಿಷಯದಲ್ಲಿ ಭಾವನಾತ್ಮಕ ಏರುಪೇರು. ವೃತ್ತಿಯಲ್ಲಿ ಸಹೋದ್ಯೋಗಿಗಳ ಅಸಹಕಾರ. ಆರ್ಥಿಕ ಒತ್ತಡ ಅಧಿಕ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!