Wednesday, October 5, 2022

Latest Posts

ನ್ಯಾಯಾಂಗ ಬಂಧನದ ಬೆನ್ನಲ್ಲೇ ಶಾಸಕ ರಾಜಾಸಿಂಗ್ ಗೆ ಸಿಕ್ಕಿತು ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೈದರಾಬಾದ್ ಶಾಸಕ ರಾಜಾಸಿಂಗ್ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಸಿ.ಆರ್.ಪಿ.ಸಿ. ಸೆಕ್ಷನ್ 41ರ ಪ್ರಕಾರ ನೋಟಿಸ್ ಜಾರಿ ಮಾಡಬೇಕಿತ್ತು, ಬಿಜೆಪಿ ಶಾಸಕ ರಾಜಸಿಂಗ್ ಅವರಿಗೆ ಯಾವುದೇ ನೋಟಿಸ್ ನೀಡದ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ಪೊಲೀಸರ ಕ್ರಮವನ್ನು ಶಾಸಕರ ಪರ ವಕೀಲರು ಪ್ರಶ್ನಿಸಿದ್ದರು.ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ನ್ಯಾಯಾಂಗ ಬಂಧನದ ಆದೇಶ ಹಿಂಪಡೆದು, ಜಾಮೀನು ಮಂಜೂರು ಮಾಡಿದೆ. ಕೂಡಲೇ ಬಿಡುಗಡೆಗೆ ಆದೇಶ ನೀಡಿದೆ.
ವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಹೈದರಾಬಾದ್ ನ ಗೋಶಾಮಹಲ್ ಶಾಸಕ ರಾಜಾ ಸಿಂಗ್ ಅವರನ್ನುಬಿಜೆಪಿ ಸಸ್ಪೆಂಡ್ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!