Thursday, September 29, 2022

Latest Posts

ಪಾಕ್ ಗೆ ಬಿದ್ದ ಭಾರತದ ಬ್ರಹ್ಮೋಸ್​ ಕ್ಷಿಪಣಿ: ವಾಯುಪಡೆಯ ಮೂವರು ಅಧಿಕಾರಿಗಳು ವಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2022ರ ಮಾರ್ಚ್​​ 9ರಂದು ನಡೆದ ಬ್ರಹ್ಮೋಸ್​ ಕ್ಷಿಪಣಿ ಮಿಸ್​​ ಫೈರಿಂಗ್​ ವೇಳೆ ಆಕಸ್ಮಿಕವಾಗಿ ಪಾಕ್​​ನಲ್ಲಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಐಎಎಫ್​ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ.
ಸೇವೆಯಿಂದ ವಜಾಗೊಂಡಿರುವ ಅಧಿಕಾರಿಗಳಲ್ಲಿ ಗ್ರೂಪ್ ಕ್ಯಾಪ್ಟನ್​, ವಿಂಗ್ ಕಮಾಂಡರ್​ ಮತ್ತು ಸ್ಕ್ವಾಡ್ರನ್​ ಲೀಡರ್​​ ಸೇರಿದ್ದಾರೆ. ಬ್ರಹ್ಮೋಸ್ ಕ್ಷಿಪಣಿಯನ್ನ 2022ರ ಮಾರ್ಚ್ 9ರಂದು ಆಕಸ್ಮಿಕವಾಗಿ ಹಾರಿಸಲಾಗಿತ್ತು. ಅದು ಪಾಕ್​ ನೆಲದಲ್ಲಿ ಬಿದ್ದಿತ್ತು. ಇದರ ಸತ್ಯಾಸತ್ಯತೆ ತಿಳಿದುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ತನಿಖಾ ತಂಡ ರಚನೆ ಮಾಡಿತ್ತು.
ಇದೇ ವಿಚಾರವನ್ನಿಟ್ಟುಕೊಂಡು ಉನ್ನತ ಮಟ್ಟದ ತನಿಖೆ ನಡೆಸುವಂತೆ ಪಾಕ್​​ ಆಗ್ರಹಿಸಿತ್ತು. ಜೊತೆಗೆ ಭಾರತೀಯ ರಾಯಭಾರ ಕಚೇರಿಗೆ ಕರೆ ಮಾಡಿ ಪಾರದರ್ಶಕ ತನಿಖೆಗೆ ಒತ್ತಾಯ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತ ಈ ವಿಷಯವನ್ನ ಭಾರತ ಗಂಭೀರವಾಗಿ ತೆಗೆದುಕೊಂಡಿದ್ದು, ಉನ್ನತ ಮಟ್ಟದ ವಿಚಾರಣೆಗೆ ಆದೇಶ ನೀಡಲಾಗಿದೆ ಎಂದು ಹೇಳಿತ್ತು.

ವಿಚಾರಣೆ ನಡೆಸಿದ ಬಳಿಕ ಇದೀಗ ಪ್ರಾಥಮಿಕ ಹೊಣೆಗಾರರನ್ನಾಗಿ ಮೂವರು ಐಎಎಫ್​ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ ಎಂದು ವಾಯುಪಡೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!