ಹೊಸದಿಗಂತ ಡಿಜಿಟಲ್ ಡೆಸ್ಕ್
ಪಿಎಸ್ಐ ನೇಮಕಾತಿ ಹಗರಣದ ರೂವಾರಿ ಎನ್ನಲಾದ ಆರೋಪಿ ದಿವ್ಯ ಹಾಗರಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗಿರುವ ಫೋಟೊ ವೈರಲ್ ಆಗಿದ್ದು ದಿವ್ಯ ಹಾಗೂ ಕಾಂಗ್ರೆಸ್ ನಂಟಿನ ಬಗ್ಗೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ದಿವ್ಯಾ ಬಿಜೆಪಿ ನಾಯಕರಾದ ಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಜೊತೆಗಿರುವ ಫೋಟೋಗನ್ನು ಆಧಾರವಾಗಿರಿಸಿಕೊಂಡು ಆಕೆ ಬಿಜೆಪಿ ಕಾರ್ಯಕರ್ತೆ, ಈ ಹಗರಣದಲ್ಲಿ ಬಿಜೆಪಿಯ ಪಾತ್ರವಿದೆ ಎಂಬಿತ್ಯಾದಿ ತರಹೇವಾರಿ ಆರೋಪಗಳನ್ನು ಮಾಡಿತ್ತು. ಇದೀಗ ಡಿಕೆಶಿ ಜೊತೆಗಿನ ದಿವ್ಯಾ ಫೋಟೋ ವೈರಲ್ ಆಗಿದ್ದು ಇಷ್ಟು ದಿನ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕಾಗ್ರೆಸ್ಸಿಗರ ಬಂದೂಕಿನ ಟ್ರಿಗರ್ ಇದೀಗ ಕಾಂಗ್ರೆಸ್ ಕಡೆಗೆ ಗುರಿಯಾದಂತಾಗಿದೆ. ಬಿಜೆಪಿ ವಿರುದ್ಧ ಆರೋಪಗಳಲ್ಲಿ ತೊಡಗಿದ್ದ ಕೈ ನಾಯಕರೂ ಪೇಚಿಗೆ ಸಿಲುಕಿದ್ದಾರೆ.
ಫೋಟೋ ಆಧರಿಸಿ ಗೃಹ ಸಚಿವರ ವಿರುದ್ಧವೂ ಪ್ರಕರಣ ದಾಖಲಿಸಲು ಕಾಂಗ್ರೆಸ್ ಆಗ್ರಹಿಸಿತ್ತು. ಇದೀಗ ಇದೇ ವಿಚಾರವಾಗಿ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಡಿಕೆಶಿ ಜತೆ ದಿವ್ಯಾಗೆ ಏನು ಸಂಬಂಧ? ಡಿಕೆಶಿ ವಿರುದ್ಧ ಪ್ರಕರಣ ದಾಖಲಾಗುವುದು ಯಾವಾಗ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡುತ್ತಿದ್ದಾರೆ.
ಈ ಕುರಿತು ರಾಜ್ಯ ಬಿಜೆಪಿ ಸಹ ಟ್ವಿಟ್ ಮಾಡಿದ್ದು, ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ ಎಂದು ಫೋಟೋವನ್ನು ಹಂಚಿಕೊಂಡಿದೆ.
ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ.
ಅಧಿಕಾರದಲ್ಲಿ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ!#CONgressPSIToolkit pic.twitter.com/84G874HCPy
— BJP Karnataka (@BJP4Karnataka) April 26, 2022