ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ವೃದ್ಧನಿಗೆ ಜೈಲು!

ದಿಗಂತ ವರದಿ ಹುಲಸೂರು:

ಹುಲಸೂರು ಸಮೀಪದ ಭಾಲ್ಕಿ ತಾಲೂಕಿನ ಮೇಹಕರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮ ಒಂದರಲ್ಲಿ 65 ವರ್ಷದ ವೃದ್ಧ ಒರ್ವ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಮಾಡಿ ಜೈಲು ಸೇರಿರುವ ಘಟನೆ ಜರುಗಿದೆ.

ಗ್ರಾಮದ ಭೀಮಾ ತಂದೆ ನರಸಿಂಗರಾವ ಸೂರ್ಯವಂಶಿ(65) ಆರೋಪಿ ಆಗಿದಾನೆ. ಆರೋಪಿಯ ಮನೆಯ ಪಕ್ಕ ಅಪ್ರಾಪ್ತ ವಯಸ್ಸಿನ ಬಾಲಕಿಯ ಚಿಕ್ಕಮ್ಮನ ಮನೆ ಆಗಿದ್ದು, ಆಗಾಗ ಬಾಲಕಿ ಚಿಕ್ಕಮ್ಮನ ಮನೆಗೆ ಬರುತ್ತಿದ್ದಳು. ಯಾರು ಇಲ್ಲದ ಸಮಯವನ್ನು ಸಾಧಿಸಿ ಬಾಲಕಿಗೆ ಫಸಲಾಯಿಸಿ ನಿರಂತರ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿ ಏಳು ತಿಂಗಳ ಗರ್ಭಿಣಿಯಾಗಿದ್ದು , ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿ ವೈ ಎಸ್ ಪಿ ಪಾವಡಶೆಟ್ಟಿ, ಸಿಪಿಐ ಜಿ.ಎಸ್ ಬಿರಾದಾರ, ಪಿ ಎಸ್ ಐ ಮಾಣಿಕಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!