ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ 53 ಸೇರಿದಂತೆ ದೇಶದಾದ್ಯಂತ 730 ಎಫ್‌ಎಂ ಕೇಂದ್ರಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಬುಧವಾರ (ಆ.28) ಚಾನೆಲ್ ಪ್ರಾರಂಭಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಂದಾಜು ಕನಿಷ್ಠ ಬೆಲೆ 784.87 ಕೋಟಿ ರೂ. ನಿಗದಿಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
234 ಹೊಸ ನಗರಗಳು ಮತ್ತು ಪಟ್ಟಣಗಳಲ್ಲಿ ಖಾಸಗಿ ಎಫ್‌ಎಂ ರೇಡಿಯೊದ ಪರಿಚಯವು ಖಾಸಗಿ ಎಫ್‌ಎಂ ರೇಡಿಯೊ ಕೇಂದ್ರಗಳಿಂದ ಸೇವೆ ಸಲ್ಲಿಸದ ಪ್ರದೇಶಗಳಲ್ಲಿ ಎಫ್‌ಎಂ ರೇಡಿಯೊದ ಬೇಡಿಕೆಯನ್ನು ಪರಿಹರಿಸುತ್ತದೆ ಮತ್ತು ಸ್ಥಳೀಯ ಭಾಷೆಯಲ್ಲಿ ಹೊಸ ಸ್ಥಳೀಯ ವಿಷಯವನ್ನು ಒದಗಿಸುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.