Saturday, April 1, 2023

Latest Posts

ಮದುವೆಯ ಸಂಭ್ರಮ ಮುಗಿದಿದೆ: ʻಬ್ಯಾಕ್‌ ಟು ವರ್ಕ್‌ʼ ಎನ್ನುತ್ತಾ ಕಿಯಾರಾ ವಿಶೇಷ ಸೆಲ್ಫಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಲ್ಲಿ ಸರಣಿ ಮದುವೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೆ ಬಾಲಿವುಡ್ ಲವ್‌ ಬರ್ಡ್ಸ್ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಫೆಬ್ರವರಿ 7 ರಂದು ಸಿದ್ಧಾರ್ಥ್-ಕಿಯಾರಾ ವಿವಾಹವಾಗಿ ನಂತರ ದೆಹಲಿಯಲ್ಲಿ ಕುಟುಂಬ ಆರತಕ್ಷತೆ ಮತ್ತು ಮುಂಬೈನಲ್ಲಿ ಬಾಲಿವುಡ್ ಆರತಕ್ಷತೆಯನ್ನು ಹೊಂದಿದ್ದರು. ಇಷ್ಟು ದಿನ ಮೋಜು ಮಸ್ತಿಯಲ್ಲಿದ್ದ ಈ ನವ ಜೋಡಿ ಈಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಹಾಗಾಗಿ ಕಿಯಾರಾ ಬ್ಯಾಕ್ ಟು ವರ್ಕ್ ಎಂದು ಪೋಸ್ಟ್ ಮಾಡಿದ್ದಾರೆ. ಕಿಯಾರಾ ಅಡ್ವಾಣಿ ಈಗ ರಾಮ್ ಚರಣ್-ಶಂಕರ್ ಚಿತ್ರದ ಜೊತೆಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸದ್ಯ ಚರಣ್ ಆಸ್ಕರ್ ಖುಷಿಯಲ್ಲಿ ಅಮೆರಿಕದಲ್ಲಿದ್ದಾರೆ. ಈ ಶೂಟಿಂಗ್ ಕೆಲ ದಿನಗಳ ಕಾಲ ಮುಂದೂಡಲಾಗಿತ್ತು. ಆದರೆ ಇಷ್ಟು ದಿನ ಮದುವೆ ಕೆಲಸದಲ್ಲಿ ಬ್ಯುಸಿಯಾಗಿದ್ದ ಕಿಯಾರಾ ಇತ್ತೀಚೆಗಷ್ಟೇ ಶೂಟಿಂಗ್ ಸ್ಪಾಟ್ ನಲ್ಲಿ ಮೇಕಪ್ ಹಾಕಿಕೊಂಡು ಮತ್ತೆ ಕೆಲಸಕ್ಕೆ ಬಂದಿದ್ದೇನೆ ಎಂದು ಮಿರರ್ ಸೆಲ್ಫಿಯನ್ನು ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಮದುವೆಯ ನಂತರವೂ ನಟಿಸುವುದನ್ನು ಮುಂದುವರಿಸುವುದಾಗಿ ಕಿಯಾರಾ ಈಗಾಗಲೇ ಘೋಷಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!