Friday, September 30, 2022

Latest Posts

ಮೊನ್ನೆ ಮೊನ್ನೆ ಪ್ಲಾಟಿನಂ ಜ್ಯುಬಿಲಿ ಆಚರಣೆ ಕಂಡು ಖುಷಿಪಟ್ಟಿದ್ದರು ರಾಣಿ ಎಲಿಜಬೆತ್ II

ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ರಾಣಿ ಎಲಿಜಬೆತ್ II ಇನ್ನಿಲ್ಲ.
ಬ್ರಿಟನ್ ಇತಿಹಾಸದಲ್ಲಿ ಅತ್ಯಂತ ದೀರ್ಘ ಅವಧಿಯ ರಾಣಿ ಎಂಬ ಹೆಗ್ಗಳಿಕೆ ಪಡೆದಿದ್ದ ಇವರು ಸುಮಾರು 70 ವರ್ಷಗಳ ಕಾಲ ದೇಶವನ್ನು ಆಳಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ರಾಣಿಗೆ ಅಂತಿಮ ದಿನಗಳಲ್ಲಿ ಪುತ್ರ ಹಾಗೂ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್, ಮೊಮ್ಮಕ್ಕಳಾದ ವಿಲಿಯಂ, ಹ್ಯಾರಿ ಮತ್ತು ಅವರ ಕುಟುಂಬದ ಮಂದಿ ಜೊತೆಯಾಗಿದ್ದರು. ಬ್ರಿಟನ್ ದೇಶವನ್ನು 70 ವರ್ಷಗಳ ಕಾಲ ಆಳಿದ್ದನ್ನು ಗುರುತಿಸುವ ಸಲುವಾಗಿ ಕಳೆದ ಜೂನ್‌ನಲ್ಲಿ ಕ್ವೀನ್ಸ್ ಪ್ಲಾಟಿನಂ ಜ್ಯುಬಿಲಿಯನ್ನೂ ವಿಜೃಂಭಣೆಯಿಂದ ಇಂಗ್ಲೆಂಡ್‌ನಲ್ಲಿ ಆಚರಣೆ ಮಾಡಲಾಗಿತ್ತು. ಈ ಬಗ್ಗೆ ರಾಷ್ಟ್ರವನ್ನು ಉದ್ದೇಶಿಸಿ ಪತ್ರ ಬರೆದಿದ್ದ ರಾಣಿ ಎಲಿಜಬೆತ್, ಈ ಸಂಭ್ರಮಾಚರಣೆ ನನ್ನ ಮನಸ್ಸಿನಾಳಕ್ಕೆ ತಟ್ಟಿದೆ ಎಂದು ತಿಳಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!