Sunday, July 3, 2022

Latest Posts

ಲಂಕೆಯಲ್ಲಿ ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್ ಸಹಿತ ಎರಡು ಡಜನ್ ‘ಮಾಧ್ಯಮ’ ಬ್ಯಾಕ್‌ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಂಕೆಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಇಂದಿನ (ಏ.3) ಮಧ್ಯರಾತ್ರಿ ಬಳಿಕ ರಾಷ್ಟ್ರ ವ್ಯಾಪಿ ಸಾಮಾಜಿಕ ಮಾಧ್ಯಮಕ್ಕೆ ಬ್ಲ್ಯಾಕ್‌ಔಟ್ ಅನ್ನು ವಿಧಿಸಿದೆ.
ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಸಹಿತ ಸುಮಾರು ಎರಡು ಡಜನ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಇಂದು ಮಧ್ಯರಾತ್ರಿಯ ಬಳಿಕ ಲಂಕೆಯಲ್ಲಿ ಕೆಲಸಮಾಡುತ್ತಿಲ್ಲ. ಈಗಾಗಲೇ ಗಲಭೆ, ಹಿಂಸಾಚಾರ ನಿಯಂತ್ರಣಕ್ಕಾಗಿ ದ್ವೀಪ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಘೋಷಣೆಯ ಬಳಿಕ ಶನಿವಾರದಿಂದ ಸೋಮವಾರದವರೆಗೆ 36 ಗಂಟೆಗಳ ಕರ್ಫ್ಯೂ ಘೋಷಿಸಲಾಗಿದೆ. ಇದರ ಬೆನ್ನಿಗೇ ಸರ್ಕಾರ ಈ ನಿರ್ಧಾರ ಘೋಷಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss