ಸೂಡಾನ್ ನಲ್ಲಿ ಸಿಲುಕಿದ ಭಾರತೀಯರು: ಇಲ್ಲಿ ರಾಜಕೀಯ ಮಾಡಬೇಡಿ ಎಂದು ಸಿದ್ದುಗೆ ಜೈಶಂಕ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಡಾನ್ ದೇಶದಲ್ಲಿನ ಹಿಂಸಾಚಾರ ಸಂಬಂಧಿಸಿ ಭಾರತದಲ್ಲಿ ವಿಪಕ್ಷಗಳು ರಾಜಕೀಯ ಮಾಡಲು ಹೊರಟಿದ್ದು, ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಖಡಕ್ ತಿರುಗೇಟು ನೀಡಿದ್ದಾರೆ.

ಅಲ್ಲಿ ಜೀವಗಳು ಅಪಾಯದಲ್ಲಿದೆ. ಇದರ ನಡುವೆ ರಾಜಕೀಯ ಮಾಡಬೇಡಿ ಖಡಕ್ ಆಗಿ ಹೇಳಿದ್ದಾರೆ.

ಅದ್ರಲ್ಲೂ ಈ ಮಾತುಗಳನ್ನು ಜೈಶಂಕರ್ ನೇರವಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಹೇಳಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಸೂಡಾನ್ ದೇಶದಲ್ಲಿನ ಹಿಂಸಾಚಾರಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಈ ಸಂಘರ್ಷದ ನಡುವೆ ಕರ್ನಾಟಕ ಹಕ್ಕಿ ಪಿಕ್ಕಿ ಬುಡಕಟ್ಟು ಸಮುದಾಯದ 30ಕ್ಕೂ ಹೆಚ್ಚು ಮಂದಿ ಆತಂಕದಲ್ಲಿ ಸಿಲುಕಿದ್ದಾರೆ. ಇವರ ರಕ್ಷಣೆಗೆ ವಿದೇಶಾಂಗ ಸಚಿವಾಲಯ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ಗೆ ಜೈಶಂಕರ್ ತಕ್ಕ ತಿರುಗೇಟು ನೀಡಿದ್ದು, ನಿಮ್ಮ ಟ್ವೀಟ್ ನೋಡಿ ಆಘಾತವಾಯಿತು. ಸೂಡಾನ್‌ನಲ್ಲಿ ಹಲವು ಜೀವಗಳು ಅಪಾಯದಲ್ಲಿದೆ. ಆದರೆ ಇಲ್ಲಿ ರಾಜಕೀಯ ಮಾಡಬೇಡಿ. ಏಪ್ರಿಲ್ 14 ರಂದು ಸೂಡನ್‌ನಲ್ಲಿ ಸಂಘರ್ಷ ಆರಂಭವಾದಗಿನಿಂದಲೂ ಭಾರತದ ರಾಯಭಾರ ಕಚೇರಿ ಸೂಡಾನ್‌ನಲ್ಲಿರುವ ಬಹುತೇಕ ಭಾರತೀಯ ಪ್ರಜೆಗಳ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ತಿರುಗೇಟು ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!