ಸೋಮವಾರ, 13 ಸೆಪ್ಟೆಂಬರ್ 2021,
ಮೇಷ
ಸಂಬಂಧ ಕೆಡಿಸಲು ಕೆಲವರು ಯತ್ನಿಸುವರು. ಬಂಧುಗಳ ಬಗ್ಗೆ ಕೇಳಿದ್ದೆಲ್ಲವನ್ನು ನಂಬಬೇಡಿ. ಪರಿಸ್ಥಿತಿ ಸರಿಯಾಗುವ ತನಕ ಆತುರಪಡದಿರಿ.
ವೃಷಭ
ಮಾನಸಿಕ ಕ್ಲೇಶ. ದೈನಂದಿನ ಕಾರ್ಯ ದಲ್ಲಿ ನಿರ್ಲಕ್ಷ್ಯದಿಂದ ತಪ್ಪು ಉಂಟಾದೀತು. ಕೌಟುಂಬಿಕ ಭಿನ್ನಮತ ಹೆಚ್ಚು ಅವಕಾಶ ಕೊಡಬೇಡಿ.
ಮಿಥುನ
ಆಪ್ತೇಷ್ಟರ ಚಿಂತೆಯಲ್ಲಿ ಮುಳುಗುತ್ತೀರಿ. ಕೆಲವು ವಿಷಯಗಳು ಮನಸ್ಸಿಗೆ ಬೇಸರ ಮೂಡಿಸುತ್ತವೆ. ಯಾರಲ್ಲಿಯೂ ಹೇಳಿಕೊಳ್ಳಲಾಗದ ಅಸಹಾಯಕತೆ.
ಕಟಕ
ಕಂಡದ್ದೆಲ್ಲ ಖರೀದಿಸಬೇಕೆಂಬ ತುಡಿತ ಬಿಟ್ಟುಬಿಡಿ. ದೇಹಕ್ಕೆ ಒಗ್ಗುವ ಆಹಾರವನ್ನಷ್ಟೆ ಸೇವಿಸಿ. ಇಲ್ಲವಾದರೆ ಆರೋಗ್ಯಕ್ಕೆ ಸಮಸ್ಯೆ.
ಸಿಂಹ
ಗೊಂದಲಭರಿತ ದಿನ. ಕುಟುಂಬಸ್ಥರ ನಡುವೆ ದಿನ ಕಳೆಯುವ ಅವಕಾಶ. ಆದರೆ ಕೆಲವು ವಿಷಯಗಳು ಹತಾಶೆಗೆ ಕಾರಣವಾಗುತ್ತವೆ. ಮಾನಸಿಕ ದುಗುಡ.
ಕನ್ಯಾ
ಇತರರ ಬೇಡಿಕೆ ಈಡೇರಿಸಲು ನಿಮ್ಮ ಜೇಬು ಬರಿದು ಮಾಡಿಕೊಳ್ಳುವ ಪ್ರಸಂಗ ಒದಗಬಹುದು. ಮಿತಿ ಮೀರಿ ಖರ್ಚು ಮಾಡಲು ಹೋಗಬೇಡಿ.
ತುಲಾ
ಖಾಸಗಿ ಬದುಕಿನಲ್ಲಿ ಕೋಲಾಹಲ. ಇಷ್ಟದ ವ್ಯಕ್ತಿಗಳ ವಿರೋಧ. ಪ್ರೀತಿಗೆ ಇದು ಸೂಕ್ತ ದಿನವಲ್ಲ. ನಿರಾಶೆ ಅನುಭವಿಸುವಿರಿ. ಉದ್ವಿಗ್ನತೆ.
ವೃಶ್ಚಿಕ
ಏರುಪೇರಿನ ದಿನ. ಸಂವಹನದ ಕೊರತೆಯಿಂದ ಆಪ್ತರ ಜತೆ ಅಭಿಪ್ರಾಯ ಭೇದ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆರೋಗ್ಯ ಸುಸ್ಥಿರ.
ಧನು
ಮಾನಸಿಕ ಹಾಗೂ ದೈಹಿಕ ಬಳಲಿಕೆ. ಉತ್ಸಾಹ ತುಂಬುವ ವ್ಯಕ್ತಿಗಳ ಜತೆ ಸೇರಿಕೊಳ್ಳಿ. ಚಿಂತೆಯನ್ನು ದೂರ ಸರಿಸಿರಿ.
ಮಕರ
ಕುಟುಂಬ ಸದಸ್ಯ ರೊಬ್ಬರ ಕುರಿತಂತೆ ತುಸು ಕಳವಳಪಡುವ ಬೆಳವಣಿಗೆ. ಆದರೆ ನಂತರ ಮನಸ್ಸಿಗೆ ನಿರಾಳ ಉಂಟಾಗುವುದು. ಆರ್ಥಿಕ ಹಿನ್ನಡೆ.
ಕುಂಭ
ಎಂದಿನಂತಿಲ್ಲದ ದಿನ. ಅಸಹಜ ಬೆಳವಣಿಗೆಗಳು. ಕೆಲವು ವಿಷಯಗಳು ಗೊಂದಲ ಸೃಷ್ಟಿಸುತ್ತವೆ. ಪ್ರೀತಿಪಾತ್ರರು ಮುನಿಸಿಕೊಂಡಾರು.
ಮೀನ
ವೃತ್ತಿಗೆ ಸಂಬಂಧಿಸಿ ಕೋಲಾಹಲದ ದಿನ. ಏರುಪೇರು ಎದುರಿಸುವಿರಿ. ಇತರರ ತಪ್ಪಿಗೆ ನೀವು ಗುರಿಯಾಗಬಹುದು. ಎಚ್ಚರ ವಹಿಸಿ.