ಹೊಸದಿಗಂತ ವರದಿ ಹಾಸನ :
ಹಾಲು ಉತ್ಪಾದಕರ ಸಂಘದ ಕಚೇರಿಗೆ ನುಗ್ಗಿದ ವಾಟರ್ ಮ್ಯಾನ್ ಕ್ಯಾನ್ನಲ್ಲಿದ್ದ ಹಾಲನ್ನು ಚೆಲ್ಲಿ ರಂಪಾಟ ಮಾಡಿರುವ ಘಟನೆ ಹಾಸನ ತಾಲ್ಲೂಕಿನ, ಉಪ್ಪಳ್ಳಿ ಗ್ರಾಮದಲ್ಲಿ ನಡೆದಿದೆ.
ಕಂದಲಿ ಗ್ರಾ.ಪಂ.ಯಲ್ಲಿ ಕೆಲಸ ಮಾಡುತ್ತಿರುವ ವಾಟರ್ ಮ್ಯಾನ್ ನಾಗೇಶ್ ಡೈರಿಯಲ್ಲಿ ಹಾಲು ಅಳೆಸುತ್ತಿದ್ದಾಗ ಏಕಾಏಕಿ ಒಳನುಗ್ಗಿ ಗಲಾಟೆ ಮಾಡಿ
ಹಾಲಿನ ಕ್ಯಾನ್ನಲ್ಲಿದ್ದ ಸುಮಾರು 200 ಲೀಟರ್ ಹಾಲು ಚೆಲ್ಲಿ ಹುಚ್ಚಾಟ ಮೆರೆದಿದ್ದಾನೆ. ಡೈರಿಗೆ ಹಾಲು ಹಾಕಲು ಬಂದಿದ್ದವರ ಮೇಲೆ ನಾಗೇಶ್ ಹಲ್ಲೆ ಕೂಡ ನಡೆಸಿ, ಮಹಿಳೆಯರ ಮೇಲೂ ಹಲ್ಲೆಗೂ ಯತ್ನಿಸಿದ್ದಾನೆ.
ವಾಟರ್ ಮ್ಯಾನ್ ನಾಗೇಶ್ ಹುಚ್ಚಾಟ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ.