Wednesday, November 30, 2022

Latest Posts

ಹಿಂದಿ ಕಿರುತೆರೆ ಜನಪ್ರಿಯ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಂದಿ ಕಿರುತೆರೆ ಜನಪ್ರಿಯ ನಟಿ ವೈಶಾಲಿ ಟಕ್ಕರ್ ಇಂದೋರ್‌ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೈಶಾಲಿ ತಮ್ಮ ರೂಮ್‌ನ ಫ್ಯಾನ್‌ಗೆ ನೇಣಿಗೆ ಶರಣಾಗಿದ್ದಾರೆ. ಬಾಗಿಲು ತೆಗೆಯದ ಕಾರಣ ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿ ಬಾಗಿಲು ಹೊಡೆಸಿದ್ದಾರೆ. ತೇಜಾಜಿ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೂಮ್‌ನಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ.
ಫಸ್ಟ್‌ ಹ್ಯಾಂಡ್‌ ಮಾಹಿತಿ ಪ್ರಕಾರ, ಲವ್ ಅಫೇರ್ ಎನ್ನಲಾಗಿದೆ.

ವೈಶಾಲಿ ಸರುರಾಲ್‌ ಸಿಮರ್ ಕಾ ಧಾರಾವಾಹಿಯಲ್ಲಿ ಅಂಜಲಿ ಭಾರದ್ವಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಸಿಸ್ಟರ್‌ನಲ್ಲಿ ಆನಂತರ ಶಿವಾನಿ ಶಿವರಾಮ್, ವಿಶ್ ಯಾ ಯಾತ್ರೆ ಧಾರಾವಾಹಿಯಲ್ಲಿ ನೇತ್ರಾ ಸಿಂಗ್, ಮನಮೋಹಿನಿ 2 ಧಾರಾವಾಹಿಯಲ್ಲಿ ಅನನ್ಯಾ ಮಿಶ್ರ ಪಾತ್ರದಲ್ಲಿ ಅಭಿನಯಿಸಿದ್ದಾರೆ.

2021ರ ಏಪ್ರಿಲ್‌ನಲ್ಲಿ ವೈಶಾಲಿ ಎಂಗೇಜ್‌ ಆಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. ರೋಕಾ ಸಮಾರಂಭದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ husband to be ಅಂತ ಪರಿಚಯಿಸಿಕೊಟ್ಟರು. ಡಾಕ್ಟರ್ ಅಭಿನಂದನ್ ಸಿಂಗ್ ಕಿನ್ಯಾದಲ್ಲಿ ದಂತ ವೈದ್ಯನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜೂನ್ ತಿಂಗಳಿನಲ್ಲಿ ಮದುವೆ ಆಗಬೇಕಿತ್ತು ಆದರೆ ಅಭಿನಂದನ್‌ ಮದುವೆ ಮುಂದೂಡಿ ಮುಂದೂಡಿ ಸೆಪ್ಟೆಂಬರ್ 2022ರಲ್ಲಿ ಗುಡ್‌ ಬೈ ಹೇಳಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!