ಎರಡು ತಿಂಗಳ ಮಗುವಿಗೆ ಯಮರೂಪಿಯಾದ ಕಾರು: ತಂದೆ-ತಾಯಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇವರ ದರುಶನ ಮುಗಿಸಿ ಮರಳುತ್ತಿದ್ದ ವೇಳೆ ಕಾರು ಪಲ್ಟಿಯಾಗಿ ಎರಡೂವರೆ ತಿಂಗಳ ಮಗು ಸಾವಿಗೀಡಾಗಿದ್ದು, ಸಣ್ಣಪುಟ್ಟ ಗಾಯಕ್ಕೊಳಗಾಗಿರುವ ತಂದೆ-ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಮರ್ಥ ಸಾವಿಗೀಡಾದ ಮಗು. ಪರಮೇಶ್-ರಮ್ಯಾ ಗಾಯಗೊಂಡಿರುವ ತಂದೆ-ತಾಯಿ.
ತುಮಕೂರು ಜಿಲ್ಲೆಯ ಕುಣಿಗಲ್​ನ ರಾಷ್ಟ್ರೀಯ ಹೆದ್ದಾರಿ-75ರ ನಾಗೇಗೌಡನ ಪಾಳ್ಯ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ.
ಮಾಗಡಿ ತಾಲೂಕಿನ ಕುದೂರು ಹೋಬಳಿಯ ನಾರಸಂದ್ರ ಗ್ರಾಮದ ಪರಮೇಶ್ ಹಾಗೂ ರಮ್ಯ ಇಂದು ಬೆಳಗ್ಗೆ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ದರುಶನ ಮುಗಿಸಿ ಕಾರಿನಲ್ಲಿ ವಾಪಸ್ ಬರುತ್ತಿದ್ದರು. ಈ ವೇಳೆ ಚಾಲನಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಸ್ಥಳಕ್ಕೆ ಅಮೃತೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!