ಕಾಂತಾರ ವರಹರೂಪಂ ವಿವಾದ ʼಕೋರ್ಟ್‌ನಲ್ಲಿʼ ಇತ್ಯರ್ಥ: ಹಾಡಿನ ಬಳಕೆಗೆ ಅನುಮತಿ, ಥೈಕ್ಕುಡಂ ಬ್ರಿಡ್ಜ್ ಗೆ ಹಿನ್ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಈ ವರ್ಷದ ಸೂಪರ್ ಹಿಟ್‌ ಚಿತ್ರ ಕಾಂತಾರದ‌ ‘ವರಾಹ ರೂಪಂ..’ ಹಾಡಿನ ಟ್ಯೂನ್ ಮೇಲೆ ಕೃತಿಚೌರ್ಯ ಆರೋಪ ಹೊರಿಸಿ ಮಲಯಾಳಂ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಂ ಬ್ರಿಡ್ಜ್’ ಸಲ್ಲಿಸಿದ್ದ ಅರ್ಜಿಯನ್ನು ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಈ ಮೂಲಕ ಕಾಂತಾರ ಚಿತ್ರತಂಡ ಹಾಗೂ ಹೊಂಬಾಳೆ ಫಿಲ್ಮ್ಸ್‌ ಗೆ ದೊಡ್ಡ ರಿಲೀಫ್‌ ಸಿಕ್ಕಂತಾಗಿದೆ. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ವರಾಹ ರೂಪಂ ಹಾಡಿನನ ಬಳಕೆಗೆ ತಡೆ ನೀಡಿತ್ತು. ಜೊತೆಗೆ ಒಪ್ಪಿಗೆ ಇಲ್ಲದೆ ಹಾಡನ್ನು ಪ್ರದರ್ಶಿಸುವಂತಿಲ್ಲ ಎಂದು ಸೂಚಿಸಿತ್ತು. ಈಗ ನ್ಯಾಯಾಲಯ ಹೊಸ ಆದೇಶ ಹೊರಡಿಸಿದ್ದು, ಈ ಹಿಂದಿನಂತೆಯೇ ವರಾಹರೂಪಂ ಹಾಡು ಬಳಕೆ ಮಾಡಲು ಚಿತ್ರತಂಡಕ್ಕೆ ಅನುಮತಿ ಸಿಕ್ಕಿದೆ.
ಕೋರ್ಟ್​ ಹಾಡಿನ ಪ್ರಸಾರಕ್ಕೆ ತಡೆ ಒಡ್ಡಿದ್ದರಿಂದ ಪ್ರೈಮ್​​ನಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಹಾಡಿನ ಟೋನ್ ಬದಲಾವಣೆ ಮಾಡಲಾಗಿತ್ತು. ಇದರಿಂದ ಮೂಲಕ ಹಾಡಿನ ಲಿರಿಕ್ಸ್‌ ಹಾಗೂ ಮ್ಯೂಸಿಕ್‌ ನಲ್ಲಿ ಬದಲಾವಣೆಯಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!