ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂಡೋಸಲ್ಫಾನ್ ಸಂತ್ರಸ್ತರಿಗೆ ತುಸು ನೆಮ್ಮದಿ ನೀಡುವ ಸುದ್ದಿ ಕಾಸರಗೋಡು ಜಿಲ್ಲಾಡಳಿತದಿಂದ ಕೇಳಿಬಂದಿದೆ.
ಸಂತ್ರಸ್ತರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಶೀಘ್ರದಲ್ಲೇ ಆನ್ಲೈನ್ ಪೋರ್ಟಲ್ ಸ್ಥಾಪಿಸಲಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಮಾಹಿತಿ ನೀಡಿದ್ದಾರೆ. ಕೋವಿಡ್ನಿಂದ ಸಾವನ್ನಪ್ಪಿದವರ ಆಶ್ರಿರಿಗೆ ಪರಿಹಾರ ನೀಡುವ ಪೋರ್ಟಲ್ನ ಮಾದರಿಯಲ್ಲಿ ಒಂದಿಷ್ಟು ಬದಲಾವಣೆ ಮೂಲಕ ನೂತನ ಪೋರ್ಟಲ್ ಕಾರ್ಯವರಸಗಲಿದೆ. ಪೋರ್ಟಲ್ ಕಾರ್ಯಾರಂಭ ಮಾಡಿದ ತಕ್ಷಣ ಎಂಡೋಸಲ್ಫಾನ್ ಪರಿಹಾರಕ್ಕೆ ಅರ್ಹರಾದವರು ಅರ್ಜಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬರಬೇಕಾಗಿಲ್ಲ. ಪೋರ್ಟಲ್ ಆರಂಭಿಸಿದ ಬಳಿಕ ಫಲಾನುಭವಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ