ದಿಗಂತ ವರದಿ ವಿಜಯಪುರ:
ಕೇಂದ್ರವು ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಿದೆ. ಬರಗಾಲ ಪರಿಹಾರ ನೀಡುವ ವಿಚಾರದಲ್ಲೂ ತಾರತಮ್ಯ ಮಾಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಳು ತಿಂಗಳಾದರೂ ಬರ ಪರಿಹಾರ ನೀಡಲಿಲ್ಲ. ಮೋದಿ, ಅಮಿತ್ ಶಾ ಅವರಿಗೆ ರಾಜ್ಯದ ಬಗ್ಗೆ ಅಸಡ್ಡೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದೇ ಅವರಿಗೆ ಸಿಟ್ಟು. ಈ ಕೋಪವನ್ನು ಅವರು ರೈತರ ಮೇಲೆ ತೋರಿಸಿಕೊಳ್ಳುತ್ತಿದ್ದಾರೆ. 4.34 ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ರಾಜ್ಯದಿಂದ ಕಟ್ಟುತ್ತೇವೆ. ರೂಪಾಯಿಯಲ್ಲಿ 13 ಪೈಸೆ ಮಾತ್ರ ಬರುತ್ತಿದೆ. ಈ ವಿಚಾರ ಸಿಎಂ ಜನರಿಗೆ ತಿಳಿಸಿದರು. ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿ ಭೇಟಿ ಮಾಡಿದರೂ ಹಣ ರಾಜ್ಯಕ್ಕೆ ನೀಡಿಲಿಲ್ಲ ಎಂದರು.
44000 ಕೋಟಿ ನಮ್ಮ ರಾಜ್ಯಕ್ಕೆ ನೀಡುತ್ತಾರೆ, ಉತ್ತರ ಭಾಗದ ರಾಜ್ಯಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡುತ್ತಾರೆ,
ಹತ್ತು ವರ್ಷದಿಂದ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಮಕ್ಕಳಿಗೆ ಗೊತ್ತಾಗಿದೆ ಎಂದರು.
ಕೃಷಾ ನದಿ ನೀರಿನ ಹಂಚಿಕೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ. ಬರ, ತೆರಿಗೆ ಅನುಪಾತ ತಾರತಮ್ಯ ಮಾಡುತ್ತಿದೆ. ಈ ವಿಚಾರವನ್ನು ರಾಜ್ಯದ ಸಂಸದರು ಮಾತನಾಡಲ್ಲ. ತೆರಿಗೆ ಹಣ ಕೊಟ್ಟಿದ್ದರೆ ಜನರಿಗೆ ಅನಕೂಲವಾಗುತ್ತಿತ್ತು. ಆದರೆ ಕೇಂದ್ರ ಜನರಿಗೆ ಅನುಕೂಲ ಮಾಡಿಲ್ಲ. ರಾಜ್ಯದ ಸಂಸದರು ಮೌನವಾಗಿದ್ದಾರೆ.
ಇಂಥ ಸಂಸದರು ನಮಗೆ ಬೇಕಿಲ್ಲ. ಹಾಗಾಗಿ ಕಾಂಗ್ರೆಸ್ಸಿನ ಹೆಚ್ವು ಸಂಸದರು ಲೋಕಸಭೆಗೆ ಆಯ್ಕೆಯಾಗಬೇಕು ಎಂದರು.
ಈ ಬಾರಿ ಬಿಜೆಪಿಗೆ ಕೇವಲ 200 ಸ್ಥಾನಗಳು ಮಾತ್ರ ಬರುತ್ತವೆ. ಅವರ 400 ಸ್ಥಾನಗಳ ಕನಸು ಬರೀ ಕನಸಾಗಿಯೇ ಉಳಿಯುತ್ತದೆ ಎಂದರು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳನ್ನು ಡಿ.ಕೆ. ಶಿವಕುಮಾರ ಬಿಡುಗಡೆ ಮಾಡಿದ್ದಾರೆಂಬ ಅರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಿವಕುಮಾರ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ. ಡಿ.ಕೆ.ಶಿವಕುಮಾರ ಹೆಸರನ್ನು ನೂರು ಬಾರಿ, ನೂರು ವಿಚಾರಗಳಲ್ಲಿ ಹೇಳುತ್ತಾರೆ.
ಜಾರಕಿಹೋಳಿ ವಿಚಾರದಲ್ಲಿಯೂ ಡಿಕೆಶಿ ಹೆಸರು ಹೇಳಿದ್ದರು ಎಂದರು.
ಕಾಂಗ್ರೆಸ್ ಮುಖಂಡ ಸುಭಾಷ ಛಾಯಾಗೋಳ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.