ಕೊವೀಡ್ ಬಗ್ಗೆ ಮಹಿಳೆಯರು, ಗರ್ಭಿಣಿಯರಿಗೆ ಹೆಚ್ಚು ಆತಂಕ ಬೇಡ: ಡಾ. ಪರಿಮಳಾ ದೇವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಾದ್ಯಂತ ಹೆಚ್ಚುತ್ತಿರುವ ಕೋವಿಡ್ ಹಾಗೂ ಕೋವಿಡ್‌ನ ಉಪತಳಿ ಸೋಂಕುಗಳ ಬಗ್ಗೆ ಮಹಿಳೆಯರು, ಗರ್ಭಿಣಿಯರು ಹೆಚ್ಚು ಆತಂಕಕ್ಕೊಳಗಾಗುವ ಅಗತ್ಯ ಇಲ್ಲ ಎಂದು ಸ್ತ್ರೀ ರೋಗ ತಜ್ಙೆ ಡಾ. ಪರಿಮಳಾ ದೇವಿ ಹೇಳಿದ್ದಾರೆ.

ಆದರೆ ಕೋವಿಡ್ ಬಗ್ಗೆ ನಿರ್ಲಕ್ಷ್ಯ ಸಲ್ಲದು, ಆರೋಗ್ಯದ ಬಗ್ಗೆ ಇನ್ನಷ್ಟು ಹೆಚ್ಚಿನ ಕಾಳಜಿ ವಹಿಸುವುದೂ ಅಷ್ಟೇ ಅಗತ್ಯ ಎಂದು ಕೂಡಾ ಅವರು ಕಿವಿಮಾತು ಹೇಳಿದ್ದಾರೆ.

ಗರ್ಭಿಣಿ ಮಹಿಳೆಯರು ಕೂಡಾ jN1 ಬಗ್ಗೆ ಭಯಪಡಬೇಕಿಲ್ಲ. ಈಗಾಗಲೇ ಕೋವಿಡ್ ಲಸಿಕೆ ಪಡೆದಿರುವ ಕಾರಣ ಈ ವೈರಸ್‌ಗಳನ್ನು ಎದುರಿಸುವ ಶಕ್ತಿ ನಮಗಿದೆ. ಆದರೆ ಮುಂಜಾಗ್ರತೆ ವಹಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಅವರು ಹೇಳಿದ್ದಾರೆ.

ಸೋಂಕು ತಗುಲದಂತೆ ಎಚ್ಚರಿಕೆ ವಹಿಸಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಕ್ಕೆ ಆದ್ಯತೆ ನೀಡಬೇಕು, ಹೊರಗೆ ಎಲ್ಲಾದರೂ ಹೋಗಿಬಂದಲ್ಲಿ ಮನೆಗೆ ಬಂದ ತಕ್ಷಣ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು, ಜನ ಗುಂಪುಗೂಡುವ ಸ್ಥಳಗಳಿಗೆ ತೆರಳುವಾಗ ಆದಷ್ಟು ಹೆಚ್ಚಾಗಿ ಒಂಟಿಯಾಗಿರಬೇಕು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!