ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಗಣರಾಜ್ಯೋತ್ಸವ ಅಂಗವಾಗಿ ಫ್ಲವರ್ ಶೋ ನಡೆಯಲಿದೆ.
2024ರ ಫ್ಲವರ್ ಶೋಗೆ ಲಾಲ್‍ಬಾಗ್ ಸಜ್ಜಾಗುತ್ತಿದ್ದು, ಜನವರಿ 18ರಿಂದ 28ರವರೆಗೆ ಫಲಪುಷ್ಪ ಪ್ರದರ್ಶನ ಇರಲಿದೆ. 10 ದಿನಗಳ ಕಾಲ ನಡೆಯಲಿದೆ.
ತೋಟಗಾರಿಕೆ ಇಲಾಖೆಯು 12 ನೇ ಶತಮಾನದ ಸಮಾನತಾವಾದಿ ಬಸವಣ್ಣರ ವಿಚಾರ ಹಾಗೂ ಸಾಹಿತ್ಯದ ಬಗ್ಗೆ ತಿಳಿಸಿಕೊಡುವ ಥೀಮ್ ಯೊಂದಿಗೆ ಆಯೋಜನೆ ಮಾಡಿದೆ.
ಅಲ್ಲಮ್ಮ ಪ್ರಭು,ಅಂಬಿಗರ ಚೌಡಯ್ಯ ಸೇರಿದಂತೆ ಪ್ರಮುಖರ ಮೂರ್ತಿಗಳನ್ನು ಹೂ ಗಳ ಮೂಲಕ ಹರಳಲಿವೆ. ನೋಡುಗರ ಸೆಳೆಯಲು ಸಿದ್ಧಗೊಳ್ಳುತ್ತಿದೆ. ಸುಮಾರು10-12 ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಹೊಂದಿದೆ.