ಜನ್ಮದಿನದ ಖುಷಿಯಲ್ಲಿ ಕಂಗನಾ ರಣಾವತ್: ಈ ಕ್ಷಣ ಎಲ್ಲರ ಬಳಿ ಕ್ಷಮೆ ಕೇಳಿದ ಬಾಲಿವುಡ್ ನಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟಿ ಕಂಗನಾ ರಣಾವತ್​ (Kangana Ranaut) ಅವರು ಇಂದು 36ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಈ ಖುಷಿ ಕ್ಷಣದಲ್ಲಿ ಅವರು, ಎಲ್ಲರ ಬಗ್ಗೆಯೂ ಬಹಳ ಸ್ನೇಹಪೂರ್ವಕವಾಗಿ ಮಾತನಾಡಿದ್ದಾರೆ ಮತ್ತು ಕ್ಷಮೆ ಕೇಳಿದ್ದಾರೆ.
ಸದಾ ಕಾಲ ಒಂದಲ್ಲ ಒಂದು ಸುದ್ದಿಯಲ್ಲಿರುವ ಕಂಗನಾ , ಇಂದು ಮನಸ್ಸಿನ ಮಾತುಗಳನ್ನಾಡಿದ್ದಾರೆ. ಜೊತೆಗೆ ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಮ್ಮ ಜನ್ಮದಿನದ ಪ್ರಯುಕ್ತ ಅವರು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಹುಟ್ಟುಹಬ್ಬದ ಸಲುವಾಗಿ ಕಂಗನಾ ರಣಾವತ್​ ಅವರು ಸಾಂಪ್ರದಾಯಿಕ ಉಡುಗೆ ಧರಿಸಿದ್ದಾರೆ. ಲಕ್ಷಣವಾಗಿ ಸೀರೆ ಧರಿಸಿ, ಬಗೆಬಗೆಯ ಆಭರಣಗಳನ್ನು ಹಾಕಿಕೊಂಡು ಕ್ಯಾಮೆರಾ ಎದುರು ಬಂದಿದ್ದಾರೆ. ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು, ಆಪ್ತರು ಹಾಗೂ ಶತ್ರುಗಳಿಗಾಗಿ ಒಂದು ವಿಶೇಷ ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ.

‘ಇಂದು ನನ್ನ ಜನ್ಮದಿನದ ಅಂಗವಾಗಿ ತಂದೆ-ತಾಯಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಸದ್ಗುರು, ಸ್ವಾಮಿ ವಿವೇಕಾನಂದ ಸೇರಿದಂತೆ ಎಲ್ಲ ಗುರುಗಳಿಗೆ ನಮಿಸುತ್ತೇನೆ. ಸಹೋದ್ಯೋಗಿಗಳಿಗೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ಅಭಾರಿ ಆಗಿದ್ದೇನೆ. ನನ್ನ ಶತ್ರುಗಳು ಈವರೆಗೂ ನನ್ನನ್ನು ಆರಾಮಾಗಿ ಇರಲು ಬಿಟ್ಟಿಲ್ಲ. ನನಗೆ ಹೋರಾಡುವುದನ್ನು ಕಲಿಸಿದ್ದೇ ಅವರು. ಎಷ್ಟೇ ಯಶಸ್ಸು ಸಿಕ್ಕರೂ ಕೂಡ ಇಂದಿಗೂ ನನ್ನನ್ನು ಜಾಗೃತವಾಗಿ ಇರುವಂತೆ ಮಾಡಿದ ಶತ್ರುಗಳಿಗೆ ಧನ್ಯವಾದಗಳು’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

‘ನನ್ನ ವಿಚಾರಧಾರೆ ತುಂಬ ಸರಳವಾಗಿದೆ. ನಾನು ಎಲ್ಲರ ಒಳಿತು ಬಯಸುತ್ತೇನೆ. ಆ ಉದ್ದೇಶದಿಂದ ನಾನು ಯಾವುದಾದರೂ ಹೇಳಿಕೆ ನೀಡಿದಾಗ ಅದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಶ್ರೀಕೃಷ್ಣನ ಕೃಪೆಯಿಂದ ನನಗೆ ಸೌಭಾಗ್ಯಯುತ ಜೀವನ ಸಿಕ್ಕಿದೆ. ಎಲ್ಲರ ಬಗ್ಗೆಯೂ ನನ್ನ ಮನಸ್ಸಿನಲ್ಲಿ ಸ್ನೇಹಪೂರ್ವಕವಾದ ಆಲೋಚನೆ ಇದೆ. ಯಾವುದೇ ಕೆಟ್ಟ ಯೋಚನೆ ಇಲ್ಲ’ ಎಂದಿದ್ದಾರೆ ಕಂಗನಾ ರಣಾವತ್​.

ಸದ್ಯ ಅವರು ‘ಚಂದ್ರಮುಖಿ 2’ ಮತ್ತು ‘ಎಮರ್ಜೆನ್ಸಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಎಮರ್ಜೆನ್ಸಿ’ ಚಿತ್ರದಲ್ಲಿ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ. ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!