Friday, June 2, 2023

Latest Posts

Weekend With Ramesh ನಲ್ಲಿ ಸ್ಯಾಂಡಲ್ ವುಡ್ ಕ್ವೀನ್: ಅಪ್ಪು ನೆನೆದು ಕಣ್ಣೀರಿಟ್ಟ ರಮ್ಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

Weekend With Ramesh ಸೀಸನ್ 5ರ ಮೊದಲ ಸಂಚಿಕೆಯಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅತಿಥಿಯಾಗಿ ಬಗಿಯಲಿದ್ದು, ಈ ಮೂಲಕ ತಮ್ಮ ಜೀವನದ ಸವಿ ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ಅಪ್ಪುನ (Appu) ನೆನೆದು ರಮ್ಯಾ ಕಣ್ಣೀರಿಟ್ಟಿದ್ದಾರೆ.
ಒಂದು ದಶಕಗಳ ಕಾಲ ಸ್ಯಾಂಡಲ್‌ವುಡ್ ಆಳಿದ ರಮ್ಯಾ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.
ಶೋ ಸಂಬಂಧಿಸಿದಂತೆ ರಮ್ಯಾ ಅವರ ಮೊದಲ ಪ್ರೋಮೋ ಬಿಟ್ಟಿದ್ದಾರೆ. ಲೈಟ್‌ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. `ಅಭಿ’ (Abhi) ಸಿನಿಮಾದಿಂದ ಶುರುವಾದ ಸಿನಿ ಜರ್ನಿ ರಾಜಕೀಯ ಕ್ಷೇತ್ರಕ್ಕೂ ಕಾಲಿಡುವ ಹಾಗೇ ಮಾಡಿತ್ತು.
ರಮ್ಯಾ ಅವರ ವೃತ್ತಿ ಜೀವನದಲ್ಲಿ ರಾಜ್‌ಕುಮಾರ್ ಕುಟುಂಬ ವಿಶೇಷವಾಗಿದೆ. ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಅವರಿಗೆ ರಮ್ಯಾ ಎಂದು ನಾಮಕರಣ ಮಾಡಿದ್ದೂ ಅವರೇ. ಇದನ್ನು ರಮ್ಯಾ ಉಲ್ಲೇಖ ಮಾಡಿದ್ದಾರೆ.

ರಕ್ಷಿತಾ ಜೊತೆಗಿನ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ `ಸಂಜು ಮತ್ತು ಗೀತಾ’ ಸಿನಿಮಾ ಯಶಸ್ಸು ಕಂಡಿತ್ತು. ಶ್ರೀನಗರ ಕಿಟ್ಟಿ ಕೂಡ ವೇದಿಕೆ ಏರಿದ್ದಾರೆ. ಈ ವೇಳೆ `ಐ ಲವ್ ಯೂ ಸಂಜು’ ಎಂದಿದ್ದಾರೆ ರಮ್ಯಾ.

ಇನ್ನು ಪುನೀತ್ ಹಾಗೂ ರಮ್ಯಾ ಅವರದ್ದು ಹಿಟ್ ಕಾಂಬಿನೇಷನ್. ಆ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. ರಮ್ಯಾ ಪುನೀತ್ ನೆನೆದು ಕಣ್ಣೀರು ಹಾಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!