ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಜೂನ್ 22ರಂದು ಅವರು ಅಮೆರಿಕದ ಸಂಸತ್ನ (United States Congress) ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆಎಂದು ಅಮೆರಿಕ ಕಾಂಗ್ರೆಸ್‌ನ ಉನ್ನತ ನಾಯಕರು ಶುಕ್ರವಾರ ಪ್ರಕಟಣೆ ಹೊರಡಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೆನೆಟ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ನಿಮ್ಮನ್ನು (ಮೋದಿ) ಆಹ್ವಾನಿಸುತ್ತಿರುವುದು ನಮಗೆ ಗೌರವದ ವಿಚಾರವಾಗಿದೆ ಎಂದು ಅಮೆರಿಕ್ ಕಾಂಗ್ರೆಸ್‌ನ ಪ್ರಕಟಣೆ ತಿಳಿಸಿದೆ. ಈ ಪ್ರಕಟಣೆಗೆ ಅಮೆರಿಕ ಸಂಸತ್ನ ಸ್ಪೀಕರ್ ಕೆವಿನ್ ಮೆಕ್ಕಾರ್ತಿ, ಸೆನೆಟ್ ಬಹುಮತದ ನಾಯಕ ಚಕ್ ಶುಮರ್, ಸೆನೆಟ್‌ನ ರಿಪಬ್ಲಿಕನ್ ನಾಯಕ ಮಿಚ್ ಮೆಕ್‌ಕಾನ್ನೆಲ್ ಹಾಗೂ ಡೆಮಾಕ್ರಟಿಕ್ ಹಕೀಮ್ ಜೆಫ್ರೀಸ್ ಅವರ ಸಹಿ ಇದೆ.
ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮೋದಿ ಮಾತನಾಡುತ್ತಿರುವುದು ಇದು ಎರಡನೇ ಬಾರಿ ಆಗಿದೆ.
ಜೂನ್ 22ರಂದು ಪ್ರಧಾನಿ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಔತಣಕೂಟವನ್ನೂ ಆಯೋಜಿಸಿದ್ದಾರೆ.