ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಸಿಪಿ ಮತ್ತು ಟಿಡಿಪಿ ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಎರಡೂ ಕಡೆಯವರು ಕಲ್ಲು-ದೊಣ್ಣೆಗಳಿಂದ ಪರಸ್ಪರ ಹಲ್ಲೆ ನಡೆಸಿರುವ ಘಟನೆ ಪಲ್ನಾಡು ಜಿಲ್ಲೆಯ ನರಸ ರಾವ್‌ಪೇಟೆಯಲ್ಲಿ ನಡೆದಿದೆ. ಈ ವೇಳೆ ಘಟನೆಯಲ್ಲಿ ಟಿಡಿಪಿ ಮುಖಂಡ ಕಡಿಯಾಲ ರಮೇಶ್ ಮತ್ತು ಅರವಿಂದ ಬಾಬು ಅವರ ಕಾರುಗಳು ಜಖಂಗೊಂಡಿವೆ. ಪೊಲೀಸರು ಆಗಮಿಸಿ ಎರಡೂ ಕಡೆಯವರನ್ನು ಚದುರಿಸಿದರು.
ಮತ್ತೊಂದೆಡೆ ಜಿಲ್ಲಾ ಟಿಡಿಪಿ ವಕ್ತಾರ ಚಲ್ಲಾ ಸುಬ್ಬರಾವ್ ಮನೆ ಮೇಲೆ ವೈಸಿಪಿ ಪದಾಧಿಕಾರಿಗಳು ದಾಳಿ ನಡೆಸಿದ್ದಾರೆ. ಪೀಠೋಪಕರಣಗಳು ಧ್ವಂಸಗೊಂಡಿದ್ದು, ಕಿಟಕಿಗಳು ಒಡೆದಿವೆ. ನಿನ್ನೆ ಶಾಸಕ ಗೋಪಿರೆಡ್ಡಿ ಶ್ರೀನಿವಾಸ್ ರೆಡ್ಡಿ ವಿರುದ್ಧ ಚಲ್ಲಾ ಸುಬ್ಬರಾವ್ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಕೋಟಪ್ಪಕೊಂಡ ರಸ್ತೆಯಲ್ಲಿರುವ ಮನೆಯನ್ನು ಸುಬ್ಬರಾವ್ ಆಕ್ರಮಿಸಿಕೊಂಡಿದ್ದಾರೆ ಎಂದು ವೈಸಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವೆ ವಾಗ್ವಾದ ನಡೆದಿತ್ತು.
ವೈಸಿಪಿ ಪದಾಧಿಕಾರಿಗಳ ದಾಳಿಯಲ್ಲಿ ಟಿಡಿಪಿ ಮುಖಂಡ ಅರವಿಂದ್ ಬಾಬು ಅವರ ಚಾಲಕ ಗಾಯಗೊಂಡಿದ್ದಾರೆ. ಇದರಿಂದ ಟಿಡಿಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸುಬ್ಬರಾವ್ ಮನೆಗೆ ತಲುಪಿದರು. ಎರಡು ಗುಂಪುಗಳ ನಡುವಿನ ಘರ್ಷಣೆಯಿಂದಾಗಿ ಕೋಟಪ್ಪಕೊಂಡ ರಸ್ತೆಯಲ್ಲಿ ಪೊಲೀಸರನ್ನು ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿ ರಸ್ತೆಯಲ್ಲೂ ಗಸ್ತು ನಡೆಸಲಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.