ದಕ್ಷಿಣ ಕೊರಿಯಾದಲ್ಲೂ ಕೆಜಿಎಫ್​ 2 ಪ್ರದರ್ಶನ; ಹೊಸ ದಾಖಲೆ ಬರೆದ ಕನ್ನಡದ ಮೊದಲ ಚಿತ್ರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪ್ರಪಂಚದಾದ್ಯಂತ ಅಬ್ಬರಿಸುತ್ತಿರುವ ಕೆಜಿಎಫ್​ ಚಾಫ್ಟರ್​ 2 ಇದೀಗ ದಕ್ಷಿಣ ಕೊರಿಯಾದಲ್ಲೂ ತೆರೆ ಕಂಡಿದ್ದು, ಈ ಮೂಲಕ ಕನ್ನಡ ಚಿತ್ರದ ಸಿನಿಮಾವೊಂದು ಹೊಸ ದಾಖಲೆ ಬರೆದಿದ್ದು, ಈ ಮೂಲಕ ಈ ದೇಶದಲ್ಲಿ ಪ್ರದರ್ಶನಗೊಂಡಿರುವ ಮೊದಲ ಕನ್ನಡ ಚಿತ್ರವಾಗಿ ಹೊರಹೊಮ್ಮಿದೆ.
ಚಿತ್ರ ತೆರೆ ಕಂಡಾಗಿನಿಂದಲೂ ಬಾಕ್ಸ್ ಆಫೀಸ್​​ನಲ್ಲಿ ಧೂಳೆಬ್ಬಿಸಿರುವ ಕೆಜಿಎಫ್​ ಚಾಫ್ಟರ್2 ಈಗಾಗಲೇ ಸಾವಿರ ಕೋಟಿ ಕ್ಲಬ್​ ಸೇರಿ ಮುನ್ನುಗ್ಗುತ್ತಿದೆ. ಹಿಂದಿಯಲ್ಲಿ ದಂಗಲ್​ ಚಿತ್ರದ ರೆಕಾರ್ಡ್​ ಸಹ ಬ್ರೇಕ್ ಮಾಡಿದೆ.
ಈ ಚಿತ್ರ ಈಗಾಗಲೇ ನೇಪಾಳ, ಬಾಂಗ್ಲಾದೇಶ, ಯುಎಸ್, ಮಲೇಷಿಯಾ, ಸಿಂಗಾಪೂರ, ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರದರ್ಶನ ಕಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೆಜಿಎಫ್​ ಚಾಪ್ಟರ್​ 2 ಈಗಾಗಲೇ 1129.38 ಕೋ.ರೂ. ಗಳಿಕೆ ಮಾಡಿದ್ದು, ಈ ಮೂಲಕ ರಾಜಮೌಳಿಯ ಆರ್​ಆರ್​ಆರ್​ ದಾಖಲೆ ಸಹ ಬ್ರೇಕ್ ಮಾಡಿದೆ. RRR ಈವರೆಗೆ 1127.65 ಕೋಟಿ ರೂ. ಗಳಿಕೆ ಮಾಡಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!