ದಿನಭವಿಷ್ಯ: ಕುಬೇರನ ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಉತ್ತಮ ದಿನ

ಮೇಷ
ನೀವಿಂದು ಹೆಚ್ಚು ಚಟುವಟಿಕೆಯಿಂದ ಇರಬೇಕಾದ ದಿನ. ಕೆಲವಾರು ಬೆಳವಣಿಗೆ ನಿಮ್ಮನ್ನು ಪ್ರತಿಕ್ಷಣ ಕಾರ್ಯತತ್ಪರರನ್ನಾಗಿ ಮಾಡುತ್ತದೆ.

ವೃಷಭ
ಭಾವನಾತ್ಮಕ ಏರುಪೇರು. ಹಳೆಯ ವಿಷಯಗಳು ಮುನ್ನೆಲೆಗೆ ಬರುತ್ತವೆ. ಪ್ರೀತಿಪಾತ್ರರ ವಿಶ್ವಾಸ ಗಳಿಸುವಿರಿ. ಆರ್ಥಿಕವಾಗಿ ಲಾಭಕರ ದಿನ.

ಮಿಥುನ
ಆರ್ಥಿಕ ಪ್ರಗತಿ. ಹಣಕಾಸಿಗೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರ. ಕುಟುಂಬ ಸದಸ್ಯರಿಂದ ಉತ್ತಮ ಸಹಕಾರ ಪಡೆಯುವಿರಿ. ದೈಹಿಕ ನೋವು ನಿವಾರಣೆ.

ಕಟಕ
ಕೆಲಸದ ಒತ್ತಡ ಅಧಿಕ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಮನಸ್ಸಿಗೆ ಖುಷಿ ಕೊಡುವ ಮುಖ್ಯ ಬೆಳವಣಿಗೆ.

ಸಿಂಹ
ಭಾವನೆಗಳು ನಿಮ್ಮ ಮೇಲೆ ಸವಾರಿ ಮಾಡಲು ಬಿಡಬೇಡಿ. ಅದು ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಆರ್ಥಿಕ ಒತ್ತಡ ಹೆಚ್ಚು.

ಕನ್ಯಾ
ಎಲ್ಲರೊಂದಿಗೆ ಇಂದು ಸೌಹಾರ್ದದಿಂದ ವರ್ತಿಸಿ. ಭಿನ್ನಮತವನ್ನು ನಿವಾರಿಸಿಕೊಳ್ಳಿ. ವಿವಾದವು ತಾರಕಕ್ಕೆ ಏರಲು ಅವಕಾಶ ಕೊಡಬೇಡಿ.

ತುಲಾ
ಗುರಿ ಸಾಧನೆಗೆ ಅನುಕೂಲ ದಿನ. ಇತರರ ಜತೆ ಸೌಹಾರ್ದದಿಂದ ವರ್ತಿಸಿ. ಆರ್ಥಿಕವಾಗಿ ನಿಮಗೆ ಪೂರಕ ಬೆಳವಣಿಗೆ.

ವೃಶ್ಚಿಕ
ಸಂತೋಷದ ದಿನ. ಈ ದಿನ ಏನು ಸಾಧಿಸಬೇಕೆಂದು ಇಚ್ಛಿಸುತ್ತೀರೋ ಅದನ್ನು ಸಾಧಿಸುವಿರಿ. ಎಲ್ಲರಿಂದ ಉತ್ತಮ ಸಹಕಾರ. ಕೌಟುಂಬಿಕ ನೆಮ್ಮದಿ.

ಧನು
ಉಲ್ಲಸಿತ ಮನಸ್ಥಿತಿ. ಏನನ್ನೋ ಸಾಧಿಸಿದ ತೃಪ್ತಿ. ಕೌಟುಂಬಿಕ ಸಮಸ್ಯೆ ಪರಿಹಾರವಾಗಿ ನಿರಾಳತೆ. ಆರ್ಥಿಕ ಬಿಕ್ಕಟ್ಟು ಕೂಡಾ ಪರಿಹಾರ ಕಾಣುವುದು.

ಮಕರ
ಯಾವುದೇ ಬೆಳವಣಿಗೆ ಇಂದು ನಿಮಗೆ ಅನುಕೂಲವನ್ನೆ ತರುವುದು. ಪ್ರತಿಕೂಲ ಸನ್ನಿವೇಶ ಉಂಟಾದರೂ ಅದು ಬಳಿಕ ನೆಮ್ಮದಿಗೆ ಕಾರಣವಾಗಲಿದೆ.

ಕುಂಭ
ನಿಮ್ಮ ದಿನವು ನಿರುತ್ಸಾಹದಿಂದ ಆರಂಭವಾದರೂ ಬಳಿಕ ಸಂತೋಷ ತುಂಬುವುದು. ಉಲ್ಲಸಿತಗೊಳಿಸುವ ಬೆಳವಣಿಗೆ.

ಮೀನ
ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂಜರಿಕೆ ಬೇಡ. ಹಿಂದಿನ ಹೂಡಿಕೆಗಳಿಂದ ಧನಲಾಭ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!