ಧಾರವಾಡದಲ್ಲಿ ಮತದಾನ ಜಾಗೃತಿ ಅಭಿಯಾನ

ಹೊಸದಿಗಂತ ವರದಿ ಧಾರವಾಡ:

ಪ್ರತಿಯೊಂದು ಚುನಾವಣೆಯಲ್ಲಿ ಮತದಾನ ಪ್ರಮಾಣ ಕ್ಷಿಣಿಸುವುದು ಆಘಾತಕಾರಿ ಸಂಗತಿ. ಪ್ರಜ್ಞಾವಂತರು ತಪ್ಪದೇ, ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ರೇಖಾ ಡೊಳ್ಳಿನವರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಚುನಾವಣಾ ಸಾಕ್ಷರತಾ ಕ್ಲಬ್, ಅಂಜುಮನ್ ಮಹಾವಿದ್ಯಾಲಯ, ಎನ್ನೆಸ್ಸೆಸ್ ಸಹಯೋಗದಲ್ಲಿ ತಾಲೂಕಿನ ಮರೇವಾಡ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ಮತದಾನ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಸರ್ವರೂ ಹಕ್ಕು ಚಲಾಯಿಸಬೇಕು. ಕೆಲವರು ಮತದಾನ ಮಾಡದಿರಲು ಕಾರಣ ಇರಬಹುದು. ಅಂತವರಿಗೆ ಸರ್ಕಾರ ನೋಟಾ ಅವಕಾಶ ಕಲ್ಪಿಸಿದೆ. ಹೀಗಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಿಳಿಸಿದರು.

ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಂ.ಮಕಾoದಾರ ಮಾತನಾಡಿ, ಸರ್ವರನ್ನು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ನೀಲವ್ವ ವಗ್ಗರ, ನೋಡಲ್ ಅಧಿಕಾರಿ ಡಾ.ಎನ್.ವಿ.ಗುದಗನವರ್, ಪತ್ರಿಕೂದ್ಯಮದ ಮುಖ್ಯಸ್ಥ ಡಾ.ಎಸ್.ಎಸ್.ಅದೋನಿ, ಐಕ್ಯೂಎಸಿ ಡಾ.ಎನ್.ಬಿ.ನಾಲತವಾಡ, ಡಾ.ಎಫ್.ಎಚ್.ನದಾಫ್ ಅನೇಕರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!