ನಿಲ್ಲದ ಕಾಂತಾರ ಹವಾ: ಸಿನಿಮಾ ನೋಡಲು ಬಂದ್ರು ಒಂದೇ ಗ್ರಾಮದಿಂದ 150 ಮಂದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಾ, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ ಮುನ್ನುಗುತ್ತಿರುವ ಕಾಂತರ ಚಿತ್ರ ಬಿಡುಗಡೆಯಾಗಿ ಒಂದು ತಿಂಗಳಾದರೂ ಚಿತ್ರಮಂದಿರ ಹೀಗಲೂ ಹೌಸ್ ಫುಲ್ ಆಗಿವೆ.

ಕಾಂತರಾ ಚಿತ್ರ ವೀಕ್ಷಿಸಲು ಮನೆಮಂದಿಯೆಲ್ಲಾ ಒಟ್ಟಾಗಿ ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿರುವುದನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ಇಲ್ಲಿ ಗ್ರಾಮದ ಜನರೆಲ್ಲಾ ಚಿತ್ರ ವೀಕ್ಷಿಸಲು ಜೊತೆಯಾಗಿ ತೆರಳಿದ್ದಾರೆ.

ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ 150 ಮಂದಿ ಗ್ರಾಮಸ್ಥರು ಏಕಕಾಲದಲ್ಲಿ ಜತೆಯಾಗಿ ಚಿತ್ರ ಮಂಗಳೂರಿನ ಸಿನಿಪಾಲಿಸ್ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿ ಹೊಸ ದಾಖಲೆ ಬರೆದಿದ್ದಾರೆ.

ತುಂಬೆ ಬೊಳ್ಳಾರಿಯ ಆಶೀರ್ವಾದ ಸೇವಾ ಸಂಘ ಹಾಗೂ ಆಶೀರ್ವಾದ ಮಹಿಳಾ ಸಂಘ ತಮ್ಮೂರಿನ ಜನರಿಗೆ ಕಾಂತರ ಸಿನಿಮಾ ವೀಕ್ಷಿಸಲು ಈ ಅವಕಾಶವನ್ನು ಒದಗಿಸಿದೆ.

ತುಂಬೆ ಆಶೀರ್ವಾದ್ ಸೇವಾ ಸಂಘ ಹಾಗೂ ಆಶೀರ್ವಾದ ಮಹಿಳಾ ಸಂಘದ ಸದಸ್ಯರು ಸೇರಿದಂತೆ ಮಕ್ಕಳು, ಮಹಿಳೆಯರು, ಹಿರಿಯರು, ಯುವಕ, ಯುವತಿಯರು ಕಾಂತಾರಾ ಚಲನ ಚಿತ್ರ ವೀಕ್ಷಿಸಿದ್ದಾರೆ. ಜೀವನದಲ್ಲಿ ಒಮ್ಮೆಯೂ ಚಿತ್ರಮಂದಿರವನ್ನೇ ನೋಡಿರದ ಅನೇಕ ಹಿರಿಯರು ಮಲ್ಟಿಫ್ಲೆಕ್ಸ್ ಥಿಯೇಟರ್ ನಲ್ಲಿ ಕಾಂತಾರ ನೋಡಿ ಸಂಭ್ರಮಿಸಿದರು. ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಚಿತ್ರ ತಂಡದಿಂದ ಮೆಚ್ಚುಗೆ:
ತುಂಬೆ ಗ್ರಾಮದ 150 ಮಂದಿ ಕಾಂತಾರ ಚಿತ್ರ ವೀಕ್ಷಿಸಲು ಬಂದಿರುವ ಸುದ್ದಿ ತಿಳಿದು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಲಾವಿರಾದ ಪ್ರಕಾಶ್ ತೂಮಿನಾಡು, ಮೈಮ್ ರಾಮದಾಸ್, ಸನಿಲ್ ಗುರು ಅವರು ಚಿತ್ರಮಂದಿರಕ್ಕೆ ಭೇಟಿ ನೀಡಿ ತಂಡದೊಂದಿಗೆ ಮಾತುಕತೆ ನಡೆಸಿ ಗ್ರಾಮಸ್ಥರು ಜೊತೆಯಾಗಿ ಕಾಂತಾರ ಚಿತ್ರ ನೋಡುವ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!