ಹೊಟ್ಟೆ ಕರಗಿಸಿ, ಫಿಟ್ ಆಗಿ: ಪೊಲೀಸ್ ಅಧಿಕಾರಿಗಳಿಗೆ ಎಡಿಜಿಪಿ ಖಡಕ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು, ಹೊಟ್ಟೆ ಬೆಳೆಸಿಕೊಳ್ಳಬಾರದು.ಫಿಟ್ ಆಗಿರಬೇಕು.ಬೇಗ ಹೊಟ್ಟೆ ಕರಗಿಸಿ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಚಿತ್ರದುರ್ಗಕ್ಕೆ ಭೇಟಿ ನೀಡಿದ ವೇಳೆ ಹೊಟ್ಟೆ ಬೆಳೆಸಿಕೊಂಡಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು ಫಿಟ್ ಆಗಿರಬೇಕು, ನೌಕರಿಗೆ ಸೇರುವಾಗ ಎಲ್ಲರೂ ಹಾಗಿರುತ್ತಾರೆ ಆದರೆ ಸರ್ವಿಸ್ ಹೆಚ್ಚುತ್ತಾ ಹೋದಂತೆ ಹೊಟ್ಟೆ ಬೆಳೆಸಿಕೊಳ್ಳುತ್ತಾರೆ, ಬೇಗ ಹೊಟ್ಟೆ ಕರಗಿಸಿ ಎಂದು ಸೂಚನೆ ನೀಡಿದ್ದಾರೆ

ಡಿವೈ ಎಸ್ ಪಿ ರೋಷನ್ ಜಮೀರ್, ಚಿತ್ರದುರ್ಗ ಡಿವೈ ಎಸ್ ಪಿ ಅನಿಲ್, ಚಳ್ಳಕೆರೆ ಡಿವೈ ಎಸ್ ಪಿ ರಮೇಶ್, ಡಿಸಿಆರ್ ಡಿ ವೈ ಎಸ್ ಪಿ ಲೋಕೇಶ್ ಮತ್ತು ಎಸ್ ಪಿ ಕಚೇರಿಯ ಸಿಪಿಐ ನಾಗರಾಜ್ ಅವರ ಹೊಟ್ಟೆಗಳನ್ನು ನೋಡಿ ‘ಹೆವಿ ವೈಟ್ ಗಳಾಗಿದ್ದೀರಿ, ನಿಮ್ಮ ಎಸ್ ಪಿಯವರ ಹಾಗೆ ಲೈಟ್ವೇಟ್ ಆಗಿ ಎಂದು ಸೂಚನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!