ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಬಂದ 100 ಹಿಂದೂಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ 100 ಹಿಂದೂಗಳು ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಬಂದಿದ್ದಾರೆ.
ಸಿಂಧ್‌ನ ತಂಡೋ ಅಲ್ಲಾಯಾರ್ ಜಿಲ್ಲೆಯಿಂದ ಬಂದ ವಲಸಿಗರು, ಇನ್ನು ಮುಂದೆ ನಾವು ಪಾಕ್‌ ಗೆ ಹಿಂತಿರುಗಲು ಬಯಸುವುದಿಲ್ಲ. ಭಾರತದಲ್ಲೇ ನೆಲೆಸಲು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ.
ಸುಮಾರು 100 ಜನರಿರುವ ಭಿಲ್ ಸಮುದಾಯಕ್ಕೆ ಸೇರಿದ ಎರಡು ಗುಂಪುಗಳು ಅಟ್ಟಾರಿ-ವಾಘಾ ಚೆಕ್‌ಪೋಸ್ಟ್ ಮೂಲಕ ಭಾರತಕ್ಕೆ ಬಂದಿವೆ. ಮೊದಲ ಗುಂಪು ಅಕ್ಟೋಬರ್ 12 ರಂದು ಭಾರತವನ್ನು ದಾಟಿದರೆ, ಇನ್ನೊಂದು ಅಕ್ಟೋಬರ್ 14 ರಂದು ಬಂದಿಳಿದಿದೆ. ಅವರು ಮೊದಲು ಹರಿದ್ವಾರ ತಲುಪಿ ಅಲ್ಲಿಂದ ಜೋಧಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಪಾಕಿಸ್ತಾನದಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ಪರಿಹಾರ ಕಾರ್ಯದಲ್ಲಿ ತಾವು ಕಿರುಕುಳ ಮತ್ತು ತಾರತಮ್ಯವನ್ನು ಅನುಭವಿಸಿದ್ದೇವೆ ಎಂದು ವಲಸಿಗರು ಆರೋಪಿಸಿದ್ದಾರೆ.
ಅವರಲ್ಲಿ ಕೆಲವರು ಜೋಧ್‌ಪುರದಲ್ಲಿ ನೆಲೆಸಿದ್ದು, ಇನ್ನು ಕೆಲವರು ರಾಜಸ್ಥಾನದ ಜೈಸಲ್ಮೇರ್‌ಗೆ ತೆರಳಿದ್ದಾರೆ.
ವಲಸಿಗರು ತಮ್ಮ ದೇಶದಲ್ಲಿ ಎದುರಿಸುತ್ತಿರುವ ಕಿರುಕುಳ ಮತ್ತು ತಾರತಮ್ಯದ ಹಿನ್ನೆಲೆಯಲ್ಲಿ ಅವರಿಗೆ ಭಾರತಕ್ಕೆ ಬರುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ ಎಂದು ಸೀಮಂತ್ ಲೋಕ ಸಂಘಟನೆಯ ಮುಖ್ಯಸ್ಥ ಹಿಂದೂ ಸಿಂಗ್ ಸೋಧಾ ಹೇಳಿದ್ದಾರೆ.
“ನಾವು ಕಾನೂನುಬದ್ಧವಾಗಿರುವುದನ್ನು ಮಾಡುತ್ತೇವೆ. ಅವರು ಹಿಂತಿರುಗಲು ಬಯಸದಿದ್ದರೆ, ಇಲ್ಲಿಯೇ ಇರಲು ಔಪಚಾರಿಕತೆಯನ್ನು ಪೂರೈಸಲಾಗುತ್ತದೆ” ಎಂದು ಎಎಸ್ಪಿ (ಸಿಐಡಿ) ರಾಮೇಶ್ವರ ಲಾಲ್ ಮೇಘವಾಲ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!