ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಒಗ್ಗಟ್ಟು ಜಾಗತಿಕ ಒಳಿತಿಗೆ ಒಂದು ಶಕ್ತಿಯಾಗಿದೆ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಉಭಯ ದೇಶಗಳು ನಿಕಟವಾಗಿ ಕೆಲಸ ಮಾಡಿದೆ ಎಂದು ಅಮೆರಿಕದ ಸಂಸತ್ತಿನಲ್ಲಿ ಹಿರಿಯ ಸಂಸದ ಡ್ಯಾರೆನ್ ಸೊಟೊ ಹೇಳಿದ್ದಾರೆ.
ಬುಧವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಾತನಾಡಿರುವ ಅವರು ಭಾರತ ಮತ್ತು ಅಮೆರಿಕ ದೇಶಗಳು ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತವೆ. ಈ ಎರಡು ಮುಕ್ತ ಆರ್ಥಿಕತೆಗಳ ನಡುವಿನ ಒಗ್ಗಟ್ಟು ಜಾಗತಿಕ ಒಳಿತಿಗೆ ಒಂದು ಶಕ್ತಿಯಾಗಲಿದೆ. ಮಾರಿಯಾ ಚಂಡಮಾರುತದ ಸಂದರ್ಭದಲ್ಲಿ ಭಾರತೀಯ ಅಮೇರಿಕನ್ ಸಮುದಾಯದ ಬೆಂಬಲವು ಪೋರ್ಟೋರಿಕೋಗೆ ಸಹಾಯ ಮಾಡುವಲ್ಲಿ ಪ್ರಮುಖವಾಗಿದೆ. ಈ ಹಿಂದೆಯೂ ಕೂಡ ಬಾಹ್ಯಾಕಾಶ, ತಂತ್ರಜ್ಞಾನ, ಸೈಬರ್ ಸುರಕ್ಷತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ನಾನು ಭಾರತದ ವಿವಿಧ ಸಚಿವರೊಂದಿಗೆ ಚರ್ಚಿಸಿದ್ದೇನೆ. ಜಗತ್ತಿನ ಅಭಿವೃದ್ಧಿಗೆ ಭಾರತ ಅಮೆರಿಕದ ಒಗ್ಗಟ್ಟು ಮುಖ್ಯವಾಗಿದೆ” ಎಂದಿದ್ದಾರೆ.