ಭೀಕರ ರಸ್ತೆ ಅಪಘಾತಕ್ಕೆ ಯುವ ನಟಿ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಬಾರಾನಗರದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಬೆಂಗಾಲಿ ಯುವ ನಟಿ ಸುಚಂದ್ರಾ ದಾಸ್‌ಗುಪ್ತಾ ಮೃತಪಟ್ಟಿದ್ದಾರೆ.

ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಟಿ ನಿಧನರಾಗಿದ್ದಾರೆ. ಬೆಂಗಾಲಿ ನಿರೂಪಕಿ ಹಾಗೂ ನಟಿಯಾಗಿದ್ದ ಸುಚಂದ್ರಾ ಸಾವಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಶೂಟಿಂಗ್ ಮುಗಿಸಿ ಸುಚಂದ್ರಾ ಬೈಕ್ ರೈಡ್ ಬುಕ್ ಮಾಡಿದ್ದರು. ಈ ವೇಳೆ ಸೈಕಲ್ ಸವಾರ ಎದುರು ಬಂದಿದ್ದು, ಬೈಕ್ ಚಾಲಕ ಬ್ರೇಕ್ ಹಾಕಿದ್ದಾರೆ. ಇದರಿಂದಾಗಿ ಸುಚಂದ್ರಾ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆ ಹಿಂದಿನಿಂದ ಬಂದ ಲಾರಿ ಹರಿದು ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!