ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂದರು ನಗರಿ, ಕಡಲ ತಡಿ, ಬುದ್ಧಿವಂತರ ನಾಡು ಮಂಗಳೂರು ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ . ಇನ್ನು ಕೆಲವೇ ಕ್ಷಣದಲ್ಲಿ ಈ ನೆಲಕ್ಕೆ ವಿಶ್ವನಾಯಕನ ಆಗಮನವಾಗಲಿದ್ದು, ಜನತೆಯ ಕಾತರ ಹೆಚ್ಚಾಗಿದೆ.
ಮಹಾನ್ ನಾಯಕನನ್ನು ಎದುರುಗೊಳ್ಳಲು ನಮ್ಮ ಕುಡ್ಲ ಸರ್ವ ಸನ್ನದ್ಧವಾಗಿದೆ. ಮೋದಿ ಅಭಿಮಾನಿಗಳ ಹಲವು ದಿನಗಳ ಕಾತರಕ್ಕೆ ಇಂದು ತೆರೆ ಬೀಳಲಿದ್ದು, ವಿಶ್ವಮಾನ್ಯ ನಾಯಕನನ್ನು ಹತ್ತಿರದಿಂದ ಕಾಣುವ ಸುಯೋಗ ಒದಗಿ ಬರಲಿದೆ.
ನಗರದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ(ಲೇಡಿಹಿಲ್)ದಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತ(ನವಭಾರತ ಸರ್ಕಲ್)ದವರೆಗೆ ಸುಮಾರು ೨ ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬೆಂಬಲಿಸುವಂತೆ ಜನತೆಯನ್ನು ಮನವಿ ಮಾಡಲಿರುವ ಮೋದಿಯವರು ವಿದ್ಯುದ್ದೀಪಾಲಂಕೃತ ನಗರದ ಬೀದಿಯಲ್ಲಿ ಸಂಚರಿಸಲಿದ್ದಾರೆ.
ಪ್ರಧಾನಿ ಮೋದಿ ನೋಡಲು ಇಕ್ಕೆಲಗಳಲ್ಲೂ ಭಾರಿ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಆಗಮಿಸಿದ್ದಾರೆ.