ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಶುಕ್ರವಾರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಪವಿತ್ರ ಸ್ನಾನ ಮಾಡಲು ಆಗಮಿಸಿದರು.
ಸಂಗಮ ತ್ರಿವೇಣಿಯಲ್ಲಿ ಸ್ನಾನ ಮಾಡಿದ ನಂತರ ಅವರು ಯೋಗಿ ಸರ್ಕಾರದ ವ್ಯವಸ್ಥೆಗಳನ್ನು ಶ್ಲಾಘಿಸಿದರು.
ಮುಖ್ಯಮಂತ್ರಿಗಳು ಸಂಗಮ ಸ್ನಾನಕ್ಕೂ ಮುನ್ನ ಬಡೇ ಹನುಮಾನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಸೆಕ್ಟರ್ 7 ರಲ್ಲಿರುವ ಗುಜರಾತ್ ಪೆವಿಲಿಯನ್‌ಗೆ ಭೇಟಿ ನೀಡಿದರು.
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಯೋಗಿ ಸರ್ಕಾರದ ವ್ಯವಸ್ಥೆಗಳನ್ನು ಮುಕ್ತಕಂಠದಿಂದ ಹೊಗಳಿದರು. ಕುಂಭದಲ್ಲಿ ಉತ್ತಮ ವ್ಯವಸ್ಥೆ ಮಾಡಲಾಗಿದ್ದು, ಯಾರಿಗೂ ಯಾವುದೇ ತೊಂದರೆ ಆಗುತ್ತಿಲ್ಲ ಎಂದರು.
ಪ್ರಧಾನಮಂತ್ರಿಗಳ ಮಾರ್ಗದರ್ಶನದಲ್ಲಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವ್ಯವಸ್ಥೆಗಳು ಅದ್ಭುತ. ಸ್ವಚ್ಛತೆಯಿಂದ ಹಿಡಿದು ಎಲ್ಲಾ ಸೌಲಭ್ಯಗಳವರೆಗೆ ಎಲ್ಲವೂ ಚೆನ್ನಾಗಿದೆಎಂದರು.
ನಮಗೆ ಪವಿತ್ರ ಸ್ನಾನ ಮಾಡಲು ಅವಕಾಶ ಸಿಕ್ಕಿತು, ಇದು ನನ್ನ ಪುಣ್ಯ. ಭಾರತದ ನಂಬಿಕೆಯ ಕೇಂದ್ರವಾದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಪ್ರತಿಯೊಬ್ಬರೂ ತಮ್ಮನ್ನು ತಾವು ಪುಣ್ಯವಂತರೆಂದು ಭಾವಿಸುತ್ತಾರೆ ಎಂದರು.
ಮೋಟಾರ್ ಬೋಟ್ ಮೂಲಕ ಸಂಪೂರ್ಣ ಭದ್ರತೆಯ ನಡುವೆ ಮುಖ್ಯಮಂತ್ರಿ ತ್ರಿವೇಣಿ ಸಂಗಮಕ್ಕೆ ತಲುಪಿ ವೈದಿಕ ಮಂತ್ರಘೋಷ ಮತ್ತು ಶ್ಲೋಕಗಳ ನಡುವೆ ಪವಿತ್ರ ಸ್ನಾನ ಮಾಡಿದರು. ಈ ವೇಳೆ ಅವರು ಸೂರ್ಯನಿಗೆ ಅರ್ಘ್ಯವನ್ನೂ ಅರ್ಪಿಸಿದರು. ಅವರೊಂದಿಗೆ ಕೈಗಾರಿಕಾ ಅಭಿವೃದ್ಧಿ ಸಚಿವ ನಂದ ಗೋಪಾಲ್ ಗುಪ್ತಾ ನಂದಿ ಕೂಡ ಪವಿತ್ರ ಸ್ನಾನ ಮಾಡಿದರು. ನಂತರ ಮುಖ್ಯಮಂತ್ರಿ ಗಂಗಾ ಪೂಜೆ ಮತ್ತು ಗಂಗಾ ಆರತಿಯನ್ನೂ ಮಾಡಿದರು.