ಮೊದಲ ಮಗು ನಿರೀಕ್ಷೆಯಲ್ಲಿ ರಾಮ್ ಚರಣ್- ಉಪಾಸನಾ; ಇನ್ಸ್ಟಾಗ್ರಾಮ್ ನಲ್ಲಿ ಖುಷಿ ವಿಚಾರ ಹಂಚಿಕೊಂಡ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟಾಲಿವುಡ್‌ ಸ್ಟಾರ್‌ ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕಾಮಿನೇನಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ರಾಮ್‌ ಚರಣ್ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
“ಹನುಮಾನ್‌ ಜೀ ಅವರ ಆಶೀರ್ವಾದದೊಂದಿಗೆ ನಾನು ಈ ವಿಚಾರವನ್ನು ಪ್ರಕಟಪಡಿಸುತ್ತಿದ್ದೇನೆ, ನಾನು ಮತ್ತು ಉಪಾಸನಾ ನಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂಬ ವಿಚಾರವನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ” ಎಂದು ರಾಮ್‌ ಚರಣ್‌ ತಮ್ಮ ಇನ್ಸ್ಟಾಗ್ರಾಮ್‌ ಪೋಸ್ಟ್ ನಲ್ಿ ಬರೆದುಕೊಂಡಿದ್ದಾರೆ. ಈ ಪ್ರಕಟಣೆಗೆ ರಾಮ್ ಚರಣ್ ಅವರ ಪೋಷಕರಾದ ಚಿರಂಜೀವಿ ಮತ್ತು ಸುರೇಖಾ ಕೊನಿಡೇಲಾ ಮತ್ತು ಉಪಾಸನಾ ಅವರ ಪೋಷಕರಾದ ಶೋಬನಾ ಮತ್ತು ಅನಿಲ್ ಕಾಮಿನೇನಿ ಅವರು ಸಹ “ಪ್ರೀತಿ ಮತ್ತು ಕೃತಜ್ಞತೆಯಿಂದ” ಸಹಿ ಮಾಡಿದ್ದಾರೆ. 37 ವರ್ಷದ ರಾಮ್ ಚರಣ್ ಮತ್ತು 33 ವರ್ಷದ ಉಪಾಸನಾ ಕಾಮಿನೇನಿ ಅವರು 2012 ರಲ್ಲಿ ವಿವಾಹವಾಗಿದ್ದರು.
ರಾಮ್ ಚರಣ್ ತೆಲುಗು ಚಿತ್ರರಂಗದ ಪ್ರಮುಖ ಕುಟುಂಬಕ್ಕೆ ಸೇರಿದವರು. ಅವರು ತೆಲುಗು ಚಿತ್ರರಂಗದ ದಂತಕಥೆ ಚಿರಂಜೀವಿ ಅವರ ಮಗ. ಅಲ್ಲು ಅರವಿಂದ್ ಅವರ ಸೋದರಳಿಯ ಮತ್ತು ಅಲ್ಲು ಅರ್ಜುನ್ ಅವರ ಸೋದರಸಂಬಂಧಿ. ರಾಮ್ ಚರಣ್ 2007 ರಲ್ಲಿ ʼಚಿರುತʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮಗಧೀರ, ನಾಯಕ್, ಏವಡು, ಧ್ರುವ, ರಂಗಸ್ಥಲಂ ಮೊದಲಾದ ದೊಡ್ಡ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ.
ಈ ವರ್ಷದ ಮೆಗಾ-ಬ್ಲಾಕ್‌ಬಸ್ಟರ್ RRR ಮೂಲಕ ರಾಮ್ ಚರಣ್ ತಮ್ಮ ಮಗಧೀರ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರೊಂದಿಗೆ ಮತ್ತೊಂದು ಬ್ಲಾಕ್‌ ಬಸ್ಟರ್‌ ಹಿಟ್‌ ನೀಡಿದ್ದಾರೆ.
ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಅವರು ಶಾಲೆಯಿಂದಲೂ ಸ್ನೇಹಿತರಾಗಿದ್ದರು. ಅವರು ಡಿಸೆಂಬರ್ 2011 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅವರು ಜೂನ್ 2012 ರಲ್ಲಿ ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!