Monday, October 2, 2023

Latest Posts

ಗ್ರಾಹಕರು ದೇವರೆಂದು ಭಾವಿಸಿ ವ್ಯವಹರಿಸಿ: ಬ್ಯಾಂಕ್‌ ಸಿಬ್ಬಂದಿಗೆ ಭಾಸ್ಕರ್ ಚಕ್ರವರ್ತಿ ಕರೆ

ಹೊಸದಿಗಂತ ವರದಿ, ಬೀದರ್:
ಬ್ಯಾಂಕಿನಲ್ಲಿ ವ್ಯವಹಾರ ಇರಿಸಿಕೊಂಡ ಗ್ರಾಹಕರನ್ನು ದೇವರಂತೆ ಭಾವಿಸಿ ಉತ್ತಮ ಸೇವಾ ಭಾವನೆಯಿಂದ ಕೆಲಸ ಮಾಡುವಂತೆ ಕೆನರಾ ಬ್ಯಾಂಕ್ ಹುಬ್ಬಳ್ಳಿ ವಿಭಾಗದ ಮುಖ್ಯಸ್ಥ ಹಾಗೂ ಚಿಫ್ ಜನರಲ್ ವ್ಯವಸ್ಥಾಪಕ ಎಮ್.ಭಾಸ್ಕರ ಚಕ್ರವರ್ತಿ‌ ಅವರು ಸಿಬ್ಬಂದಿಗೆ ಕರೆ ನೀಡಿದರು.
ಬೀದರ್ ನಗರದಲ್ಲಿರುವ ಕೆನರಾ ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ಗ್ರಾಹಕರ ಹಕ್ಕುಗಳ ಕುರಿತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕಿನೊಂದಿಗೆ ವ್ಯವಹಾರ ಹೊಂದಿರುವ ಪ್ರತಿಯೊಬ್ಬ ಗ್ರಾಹಕರಿಗೂ ಕಾಳಜಿಯಿಂದ ಸೇವೆ ಸಲ್ಲಿಸಿದರೆ, ಅವರ ನಗು ಮುಖದಿಂದ ಸಂಸ್ಥೆಗೆ ಉತ್ತಮ ಹೆಸರಾಗುತ್ತದೆ ಎಂದು ಬ್ಯಾಂಕಿನ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ಇಂದು ದೇಶದಲ್ಲಿ ಕೆನರಾ ಬ್ಯಾಂಕ್ ಕೋಟ್ಯಾಂತರ ಜನರಿಗೆ ಉತ್ತಮ ಸೇವೆಯನ್ನು ಕೊಡುತ್ತಿದೆ. ದೇಶದ ಇತರೆ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳನ್ನು ಮೀರಿಸುವಂತಹ ಡಿಜಿಟಲ್ ಸೇವೆ ಕೆನರಾ ಬ್ಯಾಂಕ್ ಒದಗಿಸುತ್ತಿದೆ. ಗ್ರಾಹಕರ ಬೆಳವಣಿಗೆಯ ಜೊತೆಗೆ ಬ್ಯಾಂಕಿನ ಬೆಳವಣಿಗೆ ಸಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಕೆನರಾ ಬ್ಯಾಂಕ್ ಹುಬ್ಬಳ್ಳಿ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ಕೃಷ್ಣಾ ಕುಲಕರ್ಣಿ,  ಎಜಿಎಂ ಸಂಜಿವಪ್ಪ , ಬೀದರ್ ನಗರದ ಕೆನರಾ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ರಾಜೇಶ್ ಕುಮಾರ್,
ವ್ಯವಸ್ಥಾಪಕ ಬಸವರಾಜ ಎಮ್.ಕೊಲಿ, ಕೆನರಾ ಬ್ಯಾಂಕ್ ಸಿಬ್ಬಂದಿ ವರ್ಗದ ರಮೆಶಮಾಮಡೆಕರ, ಶರದ ನಾಗುಲ್ಲಾ, ನಿಲಮ ಕಾಂಬಳೆ, ಚಂದ್ರಶೇಖರ, ವಸಂತ್, ಭೀಮದಾಸ ಪ್ಯಾಗೆ, ಶ್ರವಣಕುಮಾರ, ಸಿದ್ದು ಗಾದಗಿ, ಪ್ರಕಾಶ ಹಾಗೂ ಬೀದರ್ ನಗರದಲ್ಲಿಯ ಇತರೆ ಕೆನರಾ ಬ್ಯಾಂಕ್ ಶಾಖಾ ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!