ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಕೇಸ್: 18 ದಿನಗಳಲ್ಲಿ ಬರೋಬ್ಬರಿ 910 ಮಂದಿಗೆ ಜ್ವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಒಂದೆಡೆ ಮಳೆ ಆದರೆ ಇನ್ನೊಂದೆಡೆ ಡೆಂಗ್ಯೂ ಕೇಸ್ ಗಳು ಸಹ ಹೆಚ್ಚಾಗುತ್ತಿವೆ. ಕಳೆದ 18 ದಿನಗಳಲ್ಲೇ ಬರೋಬ್ಬರಿ 910 ಮಂದಿಗೆ ಜ್ವರ ಕಾಣಿಸಿಕೊಂಡಿದೆ.
ರಾಜ್ಯದಲ್ಲಿ 18 ದಿನಗಳಲ್ಲಿ 910 ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಈ ಮೂಲಕ ಇಲ್ಲಿಯವರೆಗೆ 3,384 ಜನರಿಗೆ ಡೆಂಗ್ಯೂ ಕೇಸ್ ಏರಿಕೆಯಾದಂತೆ ಆಗಿದೆ.
ಬೆಂಗಳೂರು ನಗರದಲ್ಲಿ 585, ದಕ್ಷಿಣ ಕನ್ನಡ -176, ಉಡುಪಿ-356, ಚಿತ್ರದುರ್ಗ 163, ದಾವಣಗೆರೆ 114, ಹಾಸನ 124, ಬೆಳಗಾವಿ 103, ಕೊಪ್ಪಳ 100, ಮೈಸೂರು 346, ಶಿವಮೊಗ್ಗ 158, ಕಲಬುರ್ಗಿ 101 ಹಾಗೂ ವಿಜಯಪುರ 110 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
ರಾಜ್ಯ ಆರೋಗ್ಯ ಇಲಾಖೆಯಿಂದ ಜನವರಿ 1ರಿಂದ ಜೂನ್ 24ರವರೆಗೆ 62,357 ಮಂದಿಯನ್ನು ಡೆಂಗ್ಯೂ ಶಂಕೆಯಿಂದ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 3,384 ಮಂದಿಗೆ ಡೆಂಗ್ಯೂ ನಿಂದಾಗಿ ಜ್ವರ ಕಾಣಿಸಿಕೊಂಡಿದ್ದು ದೃಢಪಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!