ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಲ್ಲಿ ವ್ಯಕ್ತಿ ನಿರ್ಮಾಣದ ಕೆಲಸ: ಡಾ.ಸುರೇಶ ನಾಯಕ್

ಹೊಸದಿಗಂತ ವರದಿ, ಕಲಬುರಗಿ:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಲ್ಲಿ ವ್ಯಕ್ತಿ ನಿಮಾ೯ಣದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರ ಕಾಯ೯ಕಾರಿಣಿ ಸದಸ್ಯ ದಕ್ಷಿಣ ಮದ್ಯ ಕ್ಷೇತ್ರ ಶ್ರೀಯುತ ಡಾ.ಸುರೇಶ್ ನಾಯಕ್ ಹೇಳಿದರು.

ಸೋಮವಾರ ಜಿಲ್ಲೆಯ ಜೇವರ್ಗಿ ಪಟ್ಟಣದ ಗುರುಕುಲ ಶಾಲೆಯ ಆವರಣದಲ್ಲಿ ಪ್ರಾಥಮಿಕ ಶಿಕ್ಷಾ ವಗ೯ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದರು.

ಸಂಘದ ಶಾಖೆಗಳಲ್ಲಿ ವ್ಯಕ್ತಿ ನಿಮಾ೯ಣದ ಕೆಲಸದಿಂದ ದೇಶದ ನಿಮಾ೯ಣವಾಗುತ್ತದೆ.ಇಂತಹ ಚಟುವಟಿಕೆಗಳನ್ನು ಸ್ವಯಂಸೇವಕರಿಗೆ ಕಲಿಸಲಾಗುತ್ತದೆ. ಶಾರೀರಿಕವಾಗಿ, ಮಾನಸಿಕವಾಗಿ, ಬೆಳೆಸುವ ಮೂಲಕ ಆದಶ೯ ವ್ಯಕ್ತಿಗಳಾಗಿ ಸಂಘವು ಸ್ವಯಂಸೇವಕರನ್ನು ತಯಾರು ಮಾಡುತ್ತದೆ ಎಂದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಜಿ.ಎಮ್ ಯಾತನೂರ , ನಿವೃತ್ತ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಜೇವರ್ಗಿ ವಹಿಸಿದ್ದರು.

ಶ್ರೀ ಷಣ್ಮೂಖ ಶಿವಯೋಗಿ ಮಠದಿಂದ ಪ್ರಮುಖ ರಸ್ತೆಗಳಲ್ಲಿ ಸೋಮವಾರ ಸಾಯಂಕಾಲ ಸಂಘದ ಆಕರ್ಷಕ ಪಥಸಂಚಲನ ನಡೆಯಿತು. ಸಂಘದ ಪಥಸಂಚಲನ ಕಂಡ ಜನತೆ ಗಣವೇಶಧಾರಿ ಸ್ವಯಂಸೇವಕರ ಮೇಲೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!