ರಿಷಬ್ ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆ ಪಡಬೇಕು: ಕಾಂತರಕ್ಕೆ ಫಿದಾ ಆದ ಧನುಷ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂತಾರ ಸಿನಿಮಾಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅಬ್ಬರಿಸುತ್ತಿದ್ದು, ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಸೆಲೆಬ್ರಿಟಿಗಳುರಿಷಬ್ ಶೆಟ್ಟಿ ನಟನೆಗೆ ಫಿದಾ ಆಗಿದ್ದಾರೆ.

ಈಗಾಗಲೇ ಸಿನಿಮಾ ನೋಡಿ ತೆಲುಗು ಸ್ಟಾರ್ ಪ್ರಭಾಸ್, ನಾನಿ, ಮಲಯಾಳಂ ನಟ ಪೃಥ್ವಿರಾಜ್ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಇದೀಗ ತಮಿಳು ಸ್ಟಾರ್ ಧನುಷ್ ಕಾಂತಾರ ನೋಡಿ ಹಾಡಿಹೊಗಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಧನುಷ್, ರಿಷಬ್ ಶೆಟ್ಟಿಗೆ ನಿಮ್ಮ ಬಗ್ಗೆ ನೀವು ತುಂಬಾ ಹೆಮ್ಮೆ ಪಡಬೇಕು ಎಂದು ಹೇಳಿದ್ದಾರೆ.

‘ಕಾಂತಾರ ಮೈಂಡ್ ಬ್ಲೋಯಿಂಗ್. ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಬೇಕು. ಬೌಂಡರಿಗಳನ್ನು ದಾಟಿ ಸಿನಿಮಾ ಮಾಡುತ್ತಿರುವ ಹೊಂಬಾಳೆ ಫಿಲ್ಮ್‌ಗೆ ಅಭಿನಂದನೆಗಳು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರಿಗೆ ದೊಡ್ಡ ಹಗ್. ದೇವರು ಒಳ್ಳೆದು ಮಾಡಲಿ’ ಎಂದು ಹೇಳಿದ್ದಾರೆ.

ಧನುಷ್ ಟ್ವೀಟ್‌ಗೆ ಕನ್ನಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ಧನುಷ್ ಅಭಿಮಾನಿಗಳು ಕಾಮೆಂಟ್ ಮಾಡಿ ಕನ್ನಡ ಸಿನಿಮಾ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!