ದೇಶದ ರೈತರ ಕಲ್ಯಾಣವೇ ಮೊದಲ ಆದ್ಯತೆ: ಸಚಿವೆ ಶೋಭಾ ಕರಂದ್ಲಾಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ವಾತಂತ್ರ್ಯಾ ನಂತರ ಕೃಷಿಕರನ್ನು ಮರೆತು ಕೆಲಸ ಮಾಡಿದ ಫಲವಾಗಿ ಅನ್ನಕ್ಕಾಗಿ ಬೇರೆ ದೇಶಕ್ಕೆ ಕೈಯೊಡ್ಡುವ ದುಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿತ್ತು. ನಾವು ಚಿಕ್ಕವರಾಗಿದ್ದಾಗ ಅಮೇರಿಕಾದಲ್ಲಿ ಹಂದಿಗಳಿಗೆ ಹಾಕುತ್ತಿದ್ದ ಅಕ್ಕಿ ಮತ್ತು ಗೋಧಿಯನ್ನು ಭಾರತಕ್ಕೆ ಕಳುಹಿಸುತ್ತಿದ್ದರು ಎಂದು ಕೇಳಿದ್ದೇವೆ. ನಮಗೂ ಶಾಲೆಯಲ್ಲಿ ಸಜ್ಜಿಗೆ ಅಂತ ನೀಡುತ್ತಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಷಾದಿಸಿದರು.

ಅವರು ಶುಕ್ರವಾರ ಉಡುಪಿ ಖಾಸಗಿ ಹೋಟೆಲಿನಲ್ಲಿ ನಡೆದ ಲಘು ಉದ್ಯೋಗ ಭಾರತಿ, ಕರಾವಳಿ ಕರ್ನಾಟಕದ ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು ರಫ್ತುದಾರರ ಸಮಾವೇಶ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು

ಈ ಸಭೆಯಲ್ಲಿ ಉಪಸ್ಥಿತರಿರುವ ಹಲವಾರು ಜನ ಸಜ್ಜಿಗೆಯನ್ನು ತಿಂದಿರಬಹುದು. ಸರಕಾರಿ ಶಾಲೆಯಲ್ಲಿ ಕಲಿತವರಿಗೆ ಈ ಸಜ್ಜಿಗೆಯ ಬಗ್ಗೆ ಅನುಭವ ಆಗಿರುತ್ತದೆ. ಆದರೆ ಈಗ ಪರಿಸ್ಥಿತಿ ಹೀಗಿಲ್ಲ, ದೇಶದ ರೈತರ ಕಲ್ಯಾಣವೇ ಮೊದಲ ಆದ್ಯತೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!