ಲಿಟ್‌ ಫೆಸ್ಟ್;‌ ಕಲೆ ಸಾಹಿತ್ಯ, ಸನಾತನ ಧರ್ಮದ ಬಗ್ಗೆ ಶತಾವಧಾನಿ ಡಾ. ಆರ್.ಗಣೇಶ್ ಮಾತು

ಹೊಸದಿಗಂತ ವರದಿ, ಮಂಗಳೂರು
ಲಿಟ್ ಫೆಸ್ಟ್ ನಂತಹ ಸಾಹಿತ್ಯ ಹಬ್ಬ ಆಯೋಜನೆ ಇಂದು ಮಹತ್ವದ್ದಾಗಿದೆ. ಕಲೆ, ಸಾಹಿತ್ಯ ಹೀಗೆ ಬೇರೆ ಬೇರೆ ಕ್ಷೇತ್ರದ ಜನ ಒಂದೆಡೆ ಸೇರುವುದರಿಂದ ಸನಾತನತೆಯ ಸಬಲೀಕರಣವಾಗುತ್ತದೆ ಎಂದು ಶತಾವಧಾನಿ ಡಾ. ಆರ್.ಗಣೇಶ್ ಹೇಳಿದರು.
ಅವರು ಶುಕ್ರವಾರ ಮಂಗಳೂರಿನಲ್ಲಿ ನಾಲ್ಕನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಗೆ ಚಾಲನೆ ನೀಡಿದ ಬಳಿಕ ನಡೆದ ಮೊದಲ ಗೋಷ್ಠಿಯಲ್ಲಿ ಮಾತನಾಡಿದರು.
ಗೋಷ್ಠಿಯನ್ನು ಡಾ.ಅಜಕ್ಕಳ ಗಿರೀಶ್ ಭಟ್ ನಡೆಸಿಕೊಟ್ಟರು. ಉಡುಪಿ, ದಕ್ಷಿಣ -ಕನ್ನಡ ಜಿಲ್ಲೆ ನನಗೆ ಸಾಕಷ್ಟು ಪ್ರೇರಣೆ ನೀಡಿದೆ. ಇಲ್ಲಿನ ಕವಿಗಳಿಂದ ಸದಾ ಸ್ಫೂರ್ತಿ ಪಡೆದಿದ್ದೇನೆ. ಇಂತಹ ಸಾಹಿತ್ಯ ಹಬ್ಬ ಆಯೋಜನೆ ಇಂದು ಬಹುಮುಖ್ಯವಾಗಿದೆ. ಇಂಟರ್ನೆಟ್ ಯುಗದಲ್ಲಿ ವೈಯಕ್ತಿಕ ಬಾಂಧವ್ಯ ಕಳೆದುಕೊಂಡಿದ್ದೇವೆ. ಈ
ಸಾಹಿತ್ಯ ದೃಶ್ಯ, ಶ್ರಾವ್ಯ ಶಿಲ್ಪ, ಪ್ರತಿಯೊಂದು ಕಲೆ ಎಲ್ಲದರಲ್ಲೂ ಸಾರ್ವಭೌಮವಾಗಿ ರಸ ಇರಬೇಕು ಎಂದರು.
ಕಲೆಯ ಮೂಲ ಉದ್ದೇಶವೇ ರಸ,ರಸ ಅಂದರೆ ಹೆಚ್ಚಿನ ಅರಿವು, ಅರಿವೇ ಆನಂದ. ಅರಿವು ಆನಂದಗಳಿಗೆ ವ್ಯತ್ಯಾಸವಿಲ್ಲ. ರಸವನ್ನು ನಿರಾಕರಿಸಲು ಮುಖ್ಯ ಕಾರಣ ಭಾವಸಮೃದ್ಧಿ ಇಲ್ಲದೇ ಇರುವುದು. ನವೋದಯದವರಿಗೆ ಬಹುಪಾಂಡಿತ್ಯ ಇತ್ತು. ಆದರೆ ನಂತರದವರಿಗೆ ಅದು ಇಲ್ಲ. ಧ್ವನಿ ಇಲ್ಲದೆ ರಸ ಇಲ್ಲ. ಧ್ವನಿಪೂರ್ಣವಾಗಿ ಶೃಂಗಾರವನ್ನು ಅಭಿವ್ಯಕ್ತ ಮಾಡಬಹುದು. ರಸವೊಂದೇ ಕವಿ ನೀತಿ ಎಂದು ಕುವೆಂಪು ಹೇಳಿದ್ದರು. ಇಂದು ಕುವೆಂಪು ಅವರನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ. ಶುದ್ಧ ಸಾಹಿತ್ಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು ಇಂದಿನ ಅಗತ್ಯ ಎಂದವರು ಹೇಳಿದರು.
ಸಂಸ್ಕೃತ ಆಡುಭಾಷೆಯಾದಾಗ ಸ್ವಾರಸ್ಯ ಇರಲಿದೆ. ಭಾಷೆ ಕಲಿಯದೆ ಮೂಲಗ್ರಂಥಗಳ ಕಲಿಕೆ ಸಾಧ್ಯವಿಲ್ಲ. ವಿಜ್ಞಾನ ಅಂದರೆ ಶಾಸ್ತ್ರ ತರ್ಕ ಶುದ್ಧ ಚಿಂತನೆ ಅತ್ಯಗತ್ಯ ಎಂದು ಶತಾವಧಾನಿ ಡಾ.ಆರ್.ಗಣೇಶ್ ಹೇಳಿದರು.
ಇದೆ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಯಿಸುತ್ತಾ, ಸರಕಾರ,ಅಕಾಡೆಮಿಗಳು,ವಿಶ್ವವಿದ್ಯಾನಿಲಯಗಳು, ಅಭಿಜಾತ ಕನ್ನಡದ , ಷಟ್ಪದಿ , ಸಾಂಗತ್ಯ ಬಗ್ಗೆ ಯಾವುದೇ ರೀತಿಯ ಸಂಶೋಧನೆ,ಕಾರ್ಯಕ್ರಮ ಗಳನ್ನು ನಡೆಸುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!