ಬುಚಾ ಬೀದಿಗಳಲ್ಲಿ ರಷ್ಯಾ ಪಡೆಗಳು ನಡೆಸಿದ ಮಾರಣಹೋಮ ಉಪಗ್ರಹ ಚಿತ್ರಗಳಲ್ಲಿ ಬಯಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣ ಜನರ ಮಾರಣಹೋಮಕ್ಕೆ ಕಾರಣವಾಗಿದೆ. ಉಕ್ರೇನ್ ನ ಬುಚಾ ರಸ್ತೆಯಲ್ಲಿ ರಷ್ಯಾ ಸೇನೆ ನಡೆಸಿದ ಹತ್ಯಾಕಾಂಡಕ್ಕೆ ಮಾಕಸರ್‌ ಉಪಗ್ರಹ ಸೆರೆ ದೃಶ್ಯಗಳಲ್ಲಿ ಸಾಕ್ಷ್ಯಗಳು ಲಭ್ಯವಾಗಿದೆ. ಬುಚಾ ರಸ್ತೆಯಲ್ಲಿ ಎಲ್ಲೆಂದರಲ್ಲಿ ಶವಗಳು ಬಿದ್ದಿವೆ. ಇಂತಹ ನೀಚ ಕೃತ್ಯ ಎಸಗುತ್ತಿರುವ ರಷ್ಯಾ ವಿರುದ್ಧ ವಿಶ್ವದ ರಾಷ್ಟ್ರಗಳು ಕಿಡಿಕಾರಿವೆ. ಪುಟಿನ್ ಸೇನೆ ಸೃಷ್ಟಿಸಿದ ಮಾರಣಹೋಮ ಸುಸಂಸ್ಕೃತ ಸಮಾಜಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ತಿಂಗಳು ಮಾರ್ಚ್‌ 30ರಂದು ರಷ್ಯಾ ಸೇನೆ ನಡೆಸಿದ ಮಾರಣಹೋಮ ಜಗತ್ತಿನ ಗಮನಕ್ಕೆ ತಂದಿದೆ ಮಾಕ್ಸರ್‌ ಉಪಗ್ರಹ.
ಪುಟಿನ್‌ ಪಡೆಗಳ ದಾಳಿಗೆ ಬುಚಾದ ಬೀದಿಗಳಲ್ಲಿ ಶವಗಳು ಬಿದ್ದಿರುವುದನ್ನು ಮಾಕ್ಸರ್‌ ಚಿತ್ರೀಕರಿಸಿದೆ. ಮುಂದುವರಿದು ಮಾರ್ಚ್ 31 ರಂದು ತೆಗೆದ ಮತ್ತೊಂದು ಚಿತ್ರ ಬುಚಾದಲ್ಲಿನ ಚರ್ಚ್ ಮೈದಾನದಲ್ಲಿ ಸಾಮೂಹಿಕ ಸಮಾಧಿ ಮಾಡಿರುವ ಚಿತ್ರವೊಂದು ಕಂಡುಬಂದಿದೆ. ಈ ಚಿತ್ರದಲ್ಲಿ ಸುಮಾರು 45 ಅಡಿಗಳಷ್ಟು ಆಳವಿರುವ ಕಂದಕವನ್ನು ತೋರಿಸಿದೆ.
ಆದರೆ, ಈ ಬಗ್ಗೆ ರಷ್ಯಾ ಹೇಳುತ್ತಿರುವುದೇ ಬೇರೆ.. ಉಕ್ರೇನ್‌ನಲ್ಲಿ ಚದುರಿದ ಮೃತದೇಹಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ರಷ್ಯಾದ ರಕ್ಷಣಾ ಸಚಿವಾಲಯವು ಏಪ್ರಿಲ್ 3 ರಂದು ಪೋಸ್ಟ್ ಮಾಡಿದ ಟೆಲಿಗ್ರಾಂನಲ್ಲಿ ಹತ್ಯೆಗಳ ಹೊಣೆಗಾರಿಕೆಯನ್ನು ನಿರಾಕರಿಸಿದೆ. ಮಾರ್ಚ್ 30 ರೊಳಗೆ ತನ್ನ ಪಡೆಗಳನ್ನು ಉಕ್ರೇನ್‌ನಿಂದ ಹಿಂತೆಗೆದುಕೊಂಡಿರುವುದಾಗಿ ಹೇಳಿಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!