ಶೋಷಿತರು ಎಂದರೆ ಕೇವಲ ದಲಿತರಲ್ಲ: ಕೇಂದ್ರ ಸಚಿವ ನಾರಾಯಣಸ್ವಾಮಿ

ಹೊಸದಿಗಂತ ವರದಿ,ಕಲಬುರಗಿ:

ಶೋಷಿತರು ಎಂದರೆ ಕೇವಲ ದಲಿತರಲ್ಲ. ಎಲ್ಲ ಜಾತಿಗಳಲ್ಲಿ ಶಿಕ್ಷಣ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರೆಲ್ಲರೂ ಶೋಷಿತರೇ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.

ಸೋಮವಾರ ಕಡಗಂಚಿ ಬಳಿ ಯಿರುವ ಸಿ.ಯು.ಕೆ.ನಲ್ಲಿ ಅಂಬೇಡ್ಕರ್ ಸೆಂಟರ್ ಆಫ್ ಎಕ್ಸ್ ಲೆನ್ಸ್ ಹಾಗೂ ೩ ವಸತಿ ನಿಲಯಗಳನ್ನು ಉದ್ಘಾಟಿಸಿ ಮಾತನಾಡಿ,ನಮ್ಮ ದೇಶದಲ್ಲಿ ವರ್ಗ, ಸಮಾಜ ಮತ್ತು ಜಾತಿ ನೋಡಿ ಶಿಕ್ಷಣ ನೀಡುವಂತಹ ಮೀಸಲು ವ್ಯವಸ್ಥೆಯಿಂದ ಹಂತ, ಹಂತವಾಗಿ ನಡೆದು ಬಂದು ಇವತ್ತು ಸಂವಿಧಾನ ಮೀಸಲಾತಿ ಅಡಿಯಲ್ಲಿ
ದಲಿತ ಸಮುದಾಯಕ್ಕೆ ಯುಪಿಎಸ್ ಸಿ ಅಂತಹ ಉನ್ನತ ಹುದ್ದೆಗೇರುವಂತಹ, ತರಬೇತಿ ಇಂದು ಸಿಯುಕೆಯಲ್ಲಿ ನೀಡುತ್ತಿರುವುದು ಸ್ವಾಗತಾರ್ಹ ಎಂದ ಅವರು, ಇದರ ಸಂಪೂರ್ಣ ಲಾಭವನ್ನು ಶೋಷಿತವರ್ಗದ ವಿದ್ಯಾರ್ಥಿಗಳು ಪಡೆಯಬೇಕು ಎಂದರು.

ವಿದ್ಯಾರ್ಥಿಗಳು ಪಡೆಯುವ ಪದವಿ ಪ್ರಮಾಣಪತ್ರದಲ್ಲಿ ನಮ್ಮ ಬದುಕು ಬದಲಿ ಮಾಡುವ ಜಾದೂ ಇಲ್ಲ, ಅದು ನಾವು ಕಲಿಯುವ ಮತ್ತು ಪಡೆಯುವ ಜ್ಞಾನದಿಂದ ಮಾತ್ರ ಸಾಧ್ಯ ಎಂದು ಕಿವಿ ಮಾತು ಹೇಳಿದ ಅವರು, ಅದನ್ನು ವಿವಿಗಳಯಲ್ಲಿ ಜಾತಿ ರಹಿತವಾಗಿ ನೀಡಬೇಕು. ಆಗಲೇ ಹೊಸ ಶಿಕ್ಷಣ ನೀತಿಗೆ ಖದರು ಬರುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!